ನಮ್ಮ ಕನ್ನಡ ನಾಡು
ಕನ್ನಡ ನಾಡು ಬಲು ಇಷ್ಟ
ಕನ್ನಡ ನುಡಿಯು ಶ್ರೀಮಂತ
ಕನ್ನಡ ಜನಮನ ಅತಿಶ್ರೇಷ್ಠ " ಪ "
ಕೃಷ್ಣ ಕಾವೇರಿ ತುಂಗೆಯಲಿ
ಮಿಂದ ಪುನೀತ ಈ ಕನ್ನಡ..
ಬೆಟ್ಟ ಗುಡ್ಡಗಳ ಖಗಮೃಗಗಳ
ಚೆಲುವ ನಲಿವ ನೋಟದಲಿ
ಪುಳಕೀತ ಈ ಕನ್ನಡ.. ಬೇಲೂರು ಹಂಪೆ ಪಟ್ಟದಕಲ್ಲಿನ ಶಿಲ್ಪಕಲೆಯ ವಿಶ್ವವಿಖ್ಯಾತ ಈ ಕನ್ನಡ.."ಪ"
ಪಂಪ ರನ್ನ ಪೊನ್ನರ ಪದಪುಂಜದಲಿ ಮೆರೆದ ಮಹೋನ್ನತ ಈಕನ್ನಡ..
ದಾಸರ ಶರಣರ ವಚನ ಕೀರ್ತನದಲಿ
ಮನಸೆಳೆವ ಸಂಗೀತ ಈ ಕನ್ನಡ..
ಕದಂಬ ಹೊಯ್ಸಳ ವಿಜಯನಗರವಾಳಿದ ರಾಜವೈಭವೀತ ಈ ಕನ್ನಡ.."ಪ"
ಕನ್ನಡ ಚೆಲುವೇ ರಮಣೀಯ..
ಕನ್ನಡ ಚರಿತೆಯೇ ಸ್ಮರಣೀಯ..
ಕನ್ನಡ ನುಡಿಯೇ ಸುಮಾಧುರ್ಯ..
ಕನ್ನಡ ಜನರೇ ಆದರಣೀಯ.."ಪ"
- ಸುರೇಶ್ ಟಿ ವಿ
24 Oct 2017, 02:44 pm
Download App from Playstore: