ನೆನಪುಗಳ ನೆನಪಿಗಾಗಿ
*ನೆನಪುಗಳ ನೆನಪಿಗಾಗಿ*
ನಿನ್ನ ನೆನಪಾಗದಿರಲೆಂದು,
ನನ್ನನ್ನೆ ನಾನು ಮರೆತವನು ನಾನು|
ನಿನ್ನ ಮರೆಯಲಾಗದೆ ಮತ್ತೆ ಸೋತವನು ನಾನು|
ನಿನ್ನ ಮರೆಯುವ ಹುಚ್ಚು ,
ವಾಸಿಯಾಗದು ಏಕೋ|
ನಿನ್ನ ಕಿರುಬೆರಳ ಮುಲಾಮು ಸೋಕದಹೊರತು|
ಮತ್ತೆ ಮನಸಿಗೂ ಬಯಕೆ,
ಸುತ್ತಲು ನಿನ್ನ ಸುತ್ತಮುತ್ತ|
ಅರೆ ಗಳಿಗೆ ಬದಲಿಲ್ಲ,
ಕಾಯುತಿದೆ ನಿನ್ನ ಜಪಿಸುತ್ತಾ|
ಈ ಪ್ರಾಣಕೂ ನೀ ಬೇಕಿಹುದು,
ಜೀವಗಂಗೆಯಾಗಿ|
ಅಂತಿಮಕೂ ಆಸರೆಯು ನೀನೆ
ಕೊಲ್ಲದಿರು ನೀ ಹೀಗೆ ಮೌನಿಯಾಗಿ|
- sailent
24 Oct 2017, 09:03 pm
Download App from Playstore: