ನೆನಪೆಂಬ ಹೂಬಳ್ಳಿ..

ನಿನ್ನ ನೆನಪೆಂಬ ಹೂಬಳ್ಳಿಯನ್ನ,
ಹೃದಯದೊಳು ಬಚ್ಚಿಡುವುದು
ಎಷ್ಟೊಂದು ಚೆನ್ನ.
ಅರಳುವುದು ಬಿಳಿ ಮಲ್ಲಿಗೆಯಂತೆ,
ಕೆರಳುವುದೊಮ್ಮೊಮ್ಮೆ ಕೆಂಡ ಸಂಪಿಗೆಯಂತೆ,
ನೀ ನುಡಿದಾ ಸವಿ ಮಾತುಗಳು
ಮರಳಿ ಅರಳಿ ಹೊರಳುವವು
ಕೇದಿಗೆಯ ನರುಗಂಪಿನಂತೆ.
ನಗುವು ನಲಿದು ನುಲಿವುದು
ನಂದನವನದ ಮಂದಾರದಂತೆ,
ನಿನ್ನ ಮನದ ನೋವ ಘಾತವ ಕೂಡ
ಮುಚ್ಚಿಡಲಾರದು ನೀ ನೆಟ್ಟ ಹೂವಿನ ಗಿಡ.
ಕ್ಷಣಕೊಮ್ಮೆ ಬೀಸುವುದು
ನೆನಪೆಂಬ ಕನಕಾಂಬರ ಕಂಪು,
ಬಿಟ್ಟಿರಲಾರದು ಚೆಲುವಿ
ನಿನ್ನೊಲವ ಪ್ರೀತಿಯ ನವಿರಾದ ಒನಪು.
ಅದೋ ನೋಡು ನಲ್ಮೆಯ ಮೊಗ್ಗು,
ಕಂಡರದೇನೋ ಕವಿ ಮನದ ಹಿಗ್ಗು,
ನನ್ನ ಹೃದಯವ ನಂದನವನವಾಗಿಸಿದ ನಿನ್ನ
ಎಷ್ಟು ಕೊಂಡಾಡಿದರೂ ಸಾಕೆನಿಸದು ಇನ್ನ.
ನಿನ್ನ ಕ್ಷಣ ಮೌನ ಕೊಲ್ಲುವುದು ನನ್ನ
ತಾಳಲಾರದು ಮನ ನಿನ್ನಗಲಿಕೆಯನ್ನ.

- ಶ್ರೀಗೋ.

26 Oct 2017, 12:27 pm
Download App from Playstore: