ನೀ ಏಕೆ ನೆನಪಾದೆ

ಒಲವೇ ಒಲವೇ
ನೀ ಏಕೆ ನೆನಪಾದೆ
ಕಾಲನ ಅರಸುವ
ನದಿಯಂತೆ ನಾ ಸಾಗಿರುವೆ..!!ಪಲ್ಲವಿ!!

ಎಂದೋ ಮುಗಿದ ಸಂಜೆಯಲಿ!
ನಿರವ ಮೌನದ ಈ ರಾತ್ರಿಯಲಿ!
ಕನಸುಗಳೆ ಇಲ್ಲದ ಸಮಯದಲಿ!
ಕ್ಷಣ ಮಾತ್ರ ಬಂದು ಹೋಗುವ
ಪ್ರೇಮಕ್ಕೆ ನಾ ಬೇಡವಾಗಿರಲು
ನೀ ಏಕೆ ನೆನಪಾದೆ!!
!!ಒಲವೇ ಒಲವೇ!!

ಜೋಡಿಯು ಹುಡುಕುವ ಭರದಲಿ
ಅರಳು ಮರಳು ನಿನಾಗಿರಲು
ಪ್ರೇಮದ ಅರಮನೆಯಲಿ
ಬಿಡಿಸದ ಬಂಧದಲಿ ನಾನಿದ್ದರೂ
ವಿಧಿ ಸಾಗಿದ ಬಂಡಿಯಲಿ
ನೀ ದೂರವಾಗಿರಲು
ನೀ ಏಕೆ ನೆನಪಾದೆ!!
!!ಒಲವೇ ಒಲವೇ!!

ನಿನ್ನಯ ನೆನಪಲಿ ಕಳೆದಿರೋ
ಬದುಕನು ಹುಡುಕುತ ಸಾಗಿರಲು
ತೊರೆದಿರುವ ದಿನಗಳು ಮರಳಿ
ಪಡೆಯುವ ಕಾತೂರದಿ ನಾನಿರಲು
ನೀ ಏಕೆ ನೆನಪಾದೆ!!
!!ಒಲವೇ ಒಲವೇ!!

- sailent

26 Oct 2017, 06:20 pm
Download App from Playstore: