ಎದ್ದೇಳು ಚೆಲುವಿ

ಮಲಗಿಹಳಿನ್ನು ಚೆಲುವಿ
ಮಂದಹಾಸವ ಚೆಲ್ಲಿ
ಕಾಣುತಿಹಳೊ ಏನೋ
ಹೊಂಗನಸು ನಿದ್ರೆಯಲ್ಲಿ..

ಮೂಡಣದಿ ನೇಸರನು ಬಂದ
ಮದನಿಕೆಗೆ ಬಿಸಿಲ್ ಕೋಲು ತಂದ
ಬೆಳಗಾಯ್ತು ಏಳು ಚೆಲುವೆ
ಹೊಸ ದಿನವ ನೋಡು ಅಂದ.

ಎಳೆ ಬಿಸಿಲು ಮುತ್ತಿಟ್ಟು ಹೊಳೆದ ಕೆನ್ನೆ
ಸೆಳೆದಿಹಳು ನಿದ್ರೆಯಲು ಕನಸ ಕನ್ಯೆ
ಹಣೆಗೆ ತುಟಿಯೊತ್ತಿ ಕೋರುವೆನು ಶುಭವ
ನೀನೆದ್ದು ನೋಡೋಮ್ಮೆ ಈ ಸುಂದರ ಜಗವ.

- ಶ್ರೀಗೋ.

27 Oct 2017, 07:50 am
Download App from Playstore: