ಜೊತೆಜೊತೆಗೆ

ಬೇಕೇನು ಪ್ರೀತಿಗೆ ಸೌಂದರ್ಯ
ಅರಿತರೆ ಸಾಲದೆ ಆಂತರ್ಯ
ಕೊಡುಬಾರೆ ಒಲವ ಮಾಧುರ್ಯ
ತೋರಿ ಕೊಂಚ ನಿನ ಔದರ್ಯ

ನಿನ್ನ ಪ್ರೀತಿಗೆ ನಾನೆ ಮಗುವೆ
ನೋವಿಗೆ ತಾಯಮಡಿಲಾಗುವೆ
ನಿನ್ನ ಕಣ್ಣಿಗೆ ಸವಿಗನಸ ತರುವೆ
ಕನಸ ನನಸಿಗೆ ಜೊತೆಯಾಗಿರುವೆ

ಒಡತಿಯಾದರೆ ನೀ ನನ್ನ ಪ್ರೀತಿಗೆ
ಕಡಲ ಮುತ್ತೆಲ್ಲ ಸ್ವಂತ ನನಗೆ
ಏನೆ ‌ಎದುರಾಗಲಿ ಬಾಳ ಹಾದಿಗೆ
ನಡೆವೆ ಎಂದಿಗೂ ಜೊತೆಜೊತೆಗೆ

ಹಿತವಾದ ಪ್ರೀತಿಯಲಿ
ಸಿಹಿಗನಸ ಹೆಣೆಯುತಲಿ
ನಗುನಗುತ ನೀನಿರೆ ಜೊತೆಯಲಿ
ಸೋಲ ಕಾಣೆನು ನಾ ಜಗದಲಿ

- ಶ್ರೀಕಾವ್ಯ

27 Oct 2017, 08:12 pm
Download App from Playstore: