ನಾನೆಚ್ಚೊ ನೀನೆಚ್ಚೊ ?

ನಾ ಹೆಚ್ಚೊ ನೀ ಹೆಚ್ಚೊ
ನೆಚ್ಚಿನಲಿ ಬಿದ್ದವರೆಂಬ
ಪೈಪೋಟಿ ನಮ್ಮೊಳಗೆ ಹೊತ್ತಿಹುದು
ಇದು ಪ್ರೀತಿ ಹುಚ್ಚೊ ?

ನಾ ನೆಚ್ಚಿ ನಿನ್ನ ಮೆಚ್ಚಿ
ಪ್ರೀತಿ ದೀಪವನ್ನು ಹಚ್ಚಿ
ಕುಣಿದಿಹುದು ಮನ ಗರಿ ಬಿಚ್ಚಿ
ಒಳಗಣ್ಣ ತೆರೆದೇನೋ
ಹೊರಗಣ್ಣ ಮುಚ್ಚಿ.

ಬಣ್ಣಿಸಲಿ ಹೇಗೆ ನಿನ್ನಯ
ಸವಿನುಡಿಗಳ ಹಚ್ಚೆ
ಕಿವಿಗಳೆಡೆಯಲಿ ಸದಾ
ನಿನ್ನ ಮಾತಿನ ರಚ್ಚೆ
ಹೊರಳಾಡಿದೆ ಮನ
ನಿನ್ನ ನೆನಪಲೇ ಮನಸೋ ಇಚ್ಚೆ.

ನೀನು ಪ್ರೀತಿಯ ಭೂಮಿ
ನಾನು ಪ್ರೇಮದ ಬಾನು
ಹೂಮುತ್ತುಗಳ ಮಳೆ ಸುರಿಸಲೇನು !
ನಿನ್ನ ನೋವುಗಳ ಕೊಚ್ಚಿಕೊಂಡು ಹೋಗುವ
ಸುಖದ ಮಳೆ ಸುರಿಸಿ ಒಡ್ಡು ಒಡೆದು ಹರಿಸಲೇನು ?

- ಶ್ರೀಗೋ.

29 Oct 2017, 06:59 am
Download App from Playstore: