ನನ್ನವಳು

---ನನ್ನವಳು ಚಂದ

ಸ್ವಾತಿಯ ಮಳೆ ಚೆಂದ
ಹೊಳೆದಂಡಿಯ ಹೊಲ ಚಂದ
ಹರೆಯದ ಹೆಣ್ಣು ಬಲು ಅಂದ
ನನ್ನವಳ ಕೆಂದುಟಿಯ ಮೇಲಿನ ನಗಿ ಚಂದ
ತಂದಾನ ತಾನ ತಂದಾನ....!!

ದೇವರಿಗೆ ಹೂ ಚಂದ
ಬಡವನ ಮನ ಚಂದ
ದುಡಿದು ಉಣ್ಣುವ ಅನ್ನ ಬಲು ಅಂದ
ನನ್ನವಳ ಸಿರೆಯ ಅಂಚು ಚಂದ
ತಂದಾನ ತಾನ ತಂದಾನ...!!

ಮಾವಿನ ಗಿಡ ಚಂದ
ಕೋಗಿಲೆಯ ನುಡಿ ಚಂದ
ಗೋವಿನ ಪದವು ಬಲು ಅಂದ
ನನ್ನವಳ ಕಾಲ್ಗೇಜ್ಜೆ ಸದ್ದು ಚಂದ
ತಂದಾನ ತಾನ ತಂದಾನ...!!

ಬಾಳೆಯ ಗೊನೆ ಚಂದ
ಮಲ್ಲಿಗೆ ಪರಿಮಳ ಚಂದ
ಬಸುರಿಗೆ ಹುಣಸೆಯ ಹುಳಿ ಅಂದ
ನನ್ನವಳ ಮುಂಗುರುಳೆ ಚಂದ
ತಂದಾನ ತಾನ ತಂದಾನ...!!

ಕಾಮನಬಿಲ್ಲಿನ ಬಣ್ಣ ಚಂದ
ಅಂಭಾರಿ ಹೊತ್ತ ಆನೆ ಚಂದ
ಕೂಸೊಂದು ಇದ್ದರೆ ಮನ ಮನೆಯೆ ಅಂದ
ನನ್ನವಳ ಕಣ್ಣಿಗೆ ಕಾಡಿಗೆಯೆ ಚಂದ
ತಂದಾನ ತಾನ ತಂದಾನ...!!

ಹುಣ್ಣುಮೆಯ ಚಂದಿರ ಚಂದ
ಅಮವಾಸೆಗೆ ಚುಕ್ಕಿಗಳು ಚಂದ
ಎನ್ನ ಕವಿತೆಗೆ ನಿಮ್ಮ ಪ್ರೀತಿಯೇ ಅಂದ
ನನ್ನವಳಿಗೆ ನಾನಂದ್ರೆ ಬಲು ಚಂದ
ತಂದಾನ ತಾನ ತಂದಾನ...!!
ರವಿಕುಮಾರ್

- ರವಿಕುಮಾರ್

29 Oct 2017, 04:02 pm
Download App from Playstore: