ಕಿನ್ನರಿ

ಅಂತರಂಗದ ಹೃದಯ ಮೃದಂಗ
ತಿಳಿಯದೇ ನುಡಿಸಿದೆ ಮನಸೇ ಮಂಗ?
ಅರಿಯದ ಬಯಕೆ
ತಿಳಿಯದ ವಿಷಯಕೆ
ಪರಿತಪಿಸುತಲಿದೆ ವಯಸ್ಸೆ ಹಂಗಾ?
ತಾಳದ ಕನಸು
ಆಗದ ನನಸು
ಕಸಿಕಟ್ಟುತಲಿದೆ ನನಸಿಗೆ ಕನಸು

ಹುಚ್ಚು ಮನಸಿನಲಿ
ಕಿಚ್ಚನು ಹಚ್ಚಿ
ಹೆಚ್ಚೆಚ್ಚಾಯಿತು ಹಚ್ಚೆಯ ರೀತಿ
ಬಡಬಡಿಸಿದೆನು
ತಿಳಿಯದೆ ನಾನು
ಮನಸೆದ್ದೇಳಿತು ಅದುವೇ ಪ್ರೀತಿ
ಎಲ್ಲಿದೇ ಹೃದಯಾ
ಕನಸಿನ ವಿಷಯಾ
ಕಲ್ಪನೆಗೆ ಸಿಕ್ಕಳೋ ಅವಳೇ...! ಆಶಯ

ಅವಳೋ ಸುಂದರಿ
ಕಿರುನಗೆ ಕಿನ್ನರಿ
ಮಂದ ನಗುವಿನಲಿ ಸೆಳೆದ ನಾರಿ
ನಿರ್ಧರಿಸಿದೆನು
ಬದುಕಲಿ ನಾನು
ಪಡೆದುಕೊಳ್ಳುವೆನು ಅವಳನು ನಾನು
-ದೇವ.ಕೆ

- Dev

29 Oct 2017, 08:17 pm
Download App from Playstore: