ನಿದ್ರಾದೇವಿ
ಕತ್ತಲು ಕವಿಯುತ್ತಿದ್ದಂತೆ ಕುಂಟು
ನೆಪವ ತೋರಿ ಕಣ್ತುಂಬಿಕೊಂಡ
ನಿದ್ರಾದೇವಿಯು ತನ್ನ ಕಿಸೆಯಿಂದ
ಸವಿಗನಸ ನೀಡುವಳೋ ಕಹಿಗನಸ
ನೀಡುವಳೋ ಕಂಡವರಾರು ಇಲ್ಲಿ
ಕನಸ ಮರೆಸಿ ಮರೆಯಾಗುವಳು
ಕಣ್ತೆರೆಯುವಷ್ಟರಲ್ಲಿ
ಮೆಚ್ಚುತ ಮತ್ತೇ ಮುಚ್ಚಿದರೆ ಕಣ್ಣಾಲಿ
ಅವಳೇ ಇರುವುದಿಲ್ಲವಲ್ಲಿ.
- ಅಕವಿ
29 Oct 2017, 08:50 pm
Download App from Playstore: