ತಾಯಿ

ತಾಯ ಮಡಿಲು ಪ್ರೀತಿ ಕಡಲು
ಉಣಿಸಿ ಎದೆಯ ಹಾಲು
ತಣಿಸಿದಳು ಕಂದನ ಒಡಲು
ಅದುವೇ ಅಮೃತಕೂ ಮಿಗಿಲು

ಅವಳು‌ ಕೊಟ್ಟ ತುತ್ತು ಮುತ್ತು
ಭರವಸೆ ತುಂಬುವ ಪ್ರೀತಿ ಮಾತು
ಬೆಲೆ ಕಟ್ಟಲಾಗದ ಸ್ವಾತಿ ಮುತ್ತು
ಬಾಳಲಿ ಎಲ್ಲಕೂ ಮಿಗಿಲಾದ ಸ್ವತ್ತು

ಹೊತ್ತು ಹೆತ್ತಳು ಕುಡಿಯ ನವಮಾಸ
ಕಂದನ ಬಿಟ್ಟು ಬೇಡ ಇನ್ಯಾರ ಸಹವಾಸ
ಅವಳ ಒಡಲೇ ಇದ್ದರೂ ಉಪವಾಸ
ಕೊಡುವಳು ಕೂಸಿಗೆ ಇನ್ನಿಲ್ಲದ ಹರುಷ

ಅವಳೇ ಬಾಳಿನ‌ ನಿಜ ಅರಿವು
ದಾರಿ ತೋರೊ ಮೊದಲ ಗುರುವು
ಬೆಳಗುವಳು ಕಂದನ ಬಾಳ ದಾರಿ
ಜೢಾನದ‌ ದೀವಿಗೆಯ ಹಚ್ಚಿ ಬೆಳಕ ತೋರಿ

ಸ್ವಾರ್ಥವಿರದ ತಾಯ ಜೀವ
ಕಂಡರೂ ತನ್ನ ನಗುವಿನದೇ ‌ಸಾವ
ಬಯಸಳು ಕರುಳ ಕುಡಿಗೆ ನೋವ
ಅವಳೆ ಈ ಲೋಕದಲಿ ನಿಜ‌ ದೈವ

- ಶ್ರೀಕಾವ್ಯ

30 Oct 2017, 02:20 pm
Download App from Playstore: