ಭುವನೇಶ್ವರಿ

ವಂದಿಪೆ ನಾ ಕನ್ನಡಾಂಬೆಗೆ
ಮೊದಲೊಂದಿಪೆ ನಾ ಭುವನೇಶ್ವರಿಗೆ

ಭಾರತಾಂಬೆಯ ವರಪುತ್ರಿಗೆ
ಚರಿತ್ರೆಯೊಳ್ ಮೆರೆದ ತಾಯ್ನಾಡಿಗೆ


ಶ್ರೇಷ್ಟರಂ ಪೊತ್ತ ಭವ್ಯ ಜನನಿಗೆ
ಧೀರರಂ ಪೆತ್ತ ವೀರಮಾತೆಗೆ
ಅನರ್ಘ್ಯ ರತ್ನಗಳೆನಿಸಿದ ಕವಿವಾಣಿಗೆ
ಶರಣರಂ ಪೊರೆದ ಜನ್ಮದಾತೆಗೆ

ವಂದಿಪೆ ನಾ ಜಗದಾಂಬೆಗೆ
ಮೊದಲೊಂದಿಪೆ ನಾ ಭಾರತಾಂಬೆಗೆ
ವಂದಿಪೆನು ನಾ ಭುವನೇಶ್ವರಿಗೆ

ಶ್ರೀ ಭಾರತಾಂಬೆಯ ವರಪುತ್ರಿಗೆ
ಚರಿತ್ರೆಯೊಳ್ ಮೆರೆದ ತಾಯ್ನಾಡಿಗೆ
ಚಕ್ರವರ್ತಿಗಳಾಳಿದ ಚೆಲುವ ನಾಡಿಗೆ
ಅನ್ಯರಂ ಪೊರೆದ ದಾತಾರರ ಬೀಡಿಗೆ

ಧೀರರಂ ಪೆತ್ತ ವೀರಮಾತೆಗೆ
ಶ್ರೇಷ್ಟರಂ ಪೊತ್ತ ಭವ್ಯ ಜನನಿಗೆ
ವೈಭವದಿ ಜಸಂ ಪಡೆದ ಮುದವೀಡಿಗೆ
ಮಹೋದಯರುದಿಸಿದ ಈ ಮಣ್ಣಿಗೆ


ಅನರ್ಘ್ಯ ಕಬ್ಬಿಗರ ಸೃಜಿಸಿದ ಸರಸತಿಗೆ
ಶರಣರಂ ಪೊರೆದ ಜನ್ಮದಾತೆಗೆ
ದಾಸರಂ ನುಡಿಯಿಸಿದ ಧರಿತ್ರಿಗೆ
ಸಿದ್ಧರವತರಿಸಿದ ಶಾಂತಿಧಾಮಕೆ

ಭವ್ಯ ಆಲಯಗಳ ತವರೂರಿಗೆ
ಸಹ್ಯಾದ್ರಿ ಗಿರಿಪಂಕ್ತಿಯ ಸೌಂದರ್ಯಕೆ
ಎಲ್ಲೆಲ್ಲಿಯೂ ತುಂಬಿರಲು ಸಿರಿಸಂಪಿಗೆ
ನದ-ನದಿಗಳೊಡಗೂಡಿದ ನಂದನವನಕೆ

ಬಸವನಂ ಕೊಟ್ಟ ಕ್ರಾಂತಿಭೂಮಿಗೆ
ಮಾತೆಯರ್ ಭವಿಸಿದ ಮಲೆನಾಡಿಗೆ
ಕರುನಾಡ ಕಾವೇರಿಗೆ ಅಡಿದಾವರೆಗೆ
ಶ್ರೀ ಚಾಮುಂಡಿಯ ಪಾದ ಕಮಲಕೆ

ವಂದಿಪೆ ವಂದಿಪೆ ವಂದಿಪೆ

- Kumara.C

30 Oct 2017, 10:18 pm
Download App from Playstore: