ಹಾಲಾಯಿತೆ- ಹಾಲಾಹಲ!
ಹೆಗಲೇರಿ ಕುಣಿದು
ಮಡಿಲಲ್ಲಿ ಬೆಳೆದ ಮಗು
ಮಸಣದ ಹಾದಿ ತೋರುವಂತಾಯಿತೆ ಇಂದು!
ಕಮಜದ ಗೂಡು
ಸಿಹಿಯಾಯಿತು ನೋಡು
ದೇವಾನ್ನವು ನಂಜಾಯಿತೆ ಇಂದು!
ಹಸುಗೂಸನು ಹೊರನೂಕದಾದೆ
ರೆಕ್ಕೆಯುಳ್ಳ ಹಕ್ಕಿಯ ಬಂದಿಸಲೋದೆ
ನೀ ಪಟ್ಟ ಶ್ರಮವ ಯಾರು ಲೆಕ್ಕಿಸುವರಿಂದು!
ಒಡಹುಟ್ಟಿದವರ ದಡ ಸೇರಿಸಿದೆ
ತಾಯಿಗಾಗಿ,ತ್ಯಾಗದ ಮೇರೆ ಮೀರಿದೆ
ಸರ್ವಸ್ವವನ್ನೂ ತ್ಯಜಿಸಿ ನೀ ಒಂಟಿಯಾದೆ!
ನಿನ್ನ ಗಡಸುತನವ ಎತ್ತಿ ಹಿಡಿದರು
ನಿನ್ನ ನಿಷ್ಕಲ್ಮಶ ಪ್ರೀತಿಯ ಮರೆತರು
ನಿನ್ನವರ ದೃಷ್ಟಿಯಲ್ಲಿ ನೀನಾದೆ ಕಡುವೈರಿ!
ಮೂರು ದಶಕಗಳ ಕಾಲ
ಹೊತ್ತೆ ನೀ ಸಂಸಾರದ ಭಾರ
ಮಾಡಿದೆಲ್ಲ ,ಮೂರು ತಾಸಿನಲ್ಲಾಯಿತು ಸಂಹಾರ!
ನೀ ಮಾಡಿಟ್ಟ ಆಸ್ತಿಯ ನೀ ಹಾಕಿಕೊ
ನಿನ್ನ ಎದೆಯ ಮೇಲೆ, ಆಸಿಕೋ
ಎಂದರೆ, ನೀ ಸಲಹಿದ ಕಂದಮ್ಮರಿಂದು!
ಮೌನ ಆವರಿಸಿತು
ಮೌಲ್ಯ ಮರೆಯಾಯಿತು
ನಂದಾದೀಪವಾಗಿ ಬೆಳಗಿದ ಜ್ಯೋತಿ ನಂದಿತು!
ಶಾರಧ
- ಶಕುಂತಲಾ
31 Oct 2017, 04:24 pm
Download App from Playstore: