ನೀನಾಗದಿರುವ ಮುಳುಗುವ ಸೂರ್ಯ
ನೀ ಸನಿಹವಿರದ ನನ್ನ ಹೃದಯವು
ಸೂರ್ಯ-ಚಂದ್ರನಿರದ ಬಾನು-ಭುವಿಯಂತೆ
ನಿನ್ನ ಹೆಸರನೆ ಜಪಿಸುವ ಈ ಜೀವಕೆ
ಸದಾ ನಿನ್ನೊಲವಿನಲಿ ಬೆರೆಯಬೇಕಂತೆ!
ನೋವು ನಲಿವನ್ನು ಹಂಚಿಕೊಂಡು
ಕತ್ತಲ ಬಾಳಿಗೆ ಬೆಳಕಂತೆ ನೀ ಬಂದೆ
ಖಾಲಿ ಹೃದಯದ ತುಂಬೆಲ್ಲಾ
ಕನಸುಗಳ ಚಿತ್ರಿಸಿ ಖುಷಿಯನು ನೀ ತಂದೆ!
ನಮ್ಮ ಪ್ರೀತಿಯ ಅರಮನೆಯಲ್ಲಿ
ಕಾವಲಾಗಿರುವೆ ಸದಾ ನೆರಳಿನಂತೆ
ನಿನ್ನೆದೆಯ ತೋಟದಲ್ಲಿ, ಹೂವಿನಂತೆ
ಅರಳಿ ನಿಂತಿರುವೆ ಎಂದು ಬಾಡದಂತೆ!
ಸಂಜೆ ಸೂರ್ಯ ಮುಳುಗಿದ ಮೇಲೆ
ಚುಕ್ಕಿ-ಚಂದ್ರಮ ಬೆಳಕ ಚೆಲ್ಲುವನು ಧರೆಗೆ
ನನ್ನ ಬದುಕಿನ ಕೊನೆಯಪುಟದವರೆಗೂ
ನೀನಾಗದಿರು ಮುಳುಗುವ ಸೂರ್ಯನ ಹಾಗೆ!
ಪ್ರಿಯಾಂಕ✍
- ಪ್ರಿಯಾಂಕ
01 Nov 2017, 09:45 am
Download App from Playstore: