ಕಳೆದು ಹೋದ ಕನ್ನಡ

ಕನ್ನಡ ಕರುಳಿನ ಕೂಗು
ಕೇಳಿ ಒಂದಿಷ್ಟು ನಿಂತು,
ಕನ್ನಡವ್ವನ ಹೊರ ಹಾಕಿ
ಕಂಗ್ಲಿಷರಾಣಿ ಹೃದಯ ಸಿಂಹಾಸನದಲಿ ಕುಳ್ಳಿರಿಸಿ ಕನ್ನಡ ಉಳಿಸಿ ಉಳುಸಿ
ಎಂದೆದೆಯ ಬಡಿದುಕೊಂಡು ವರು ನೂರಾರು ಜನ
ಅಂದು,ಕನ್ನಡ ಸತ್ಯ ಕನ್ನಡ ನಿತ್ಯ ಎಂದರು
ಇಂದು, ಕಂಗ್ಲಿಷ್ ಸತ್ಯ ಕಂಗ್ಲಿಷ್ ನಿತ್ಯ ಎಂದರು
ಅಂದು, ಕನ್ನಡಕ್ಕಾಗಿ ಕೈಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂದರು
ಇಂದು, ಕಂಗ್ಲಿಷಕ್ಕಾಗಿ ಕೈಎತ್ತಿ ಕೈತುಂಬಾ ಕಾಸು ಮಾಡಿಕೊಂಡರು

- Revanasidda Goudar

01 Nov 2017, 02:22 pm
Download App from Playstore: