ಅಲೆಗಳ ಹಾವಳಿ

ಅಲೆಗಳಲ್ಲಿ ಮೂಡದ ತಂಪಾದ ಇಬ್ಬನಿ ಎಲ್ಲಿಂದಲೋ ಬಂದು ಇಂದು ಮನತಣಿಸಿದೆ ನಿನ್ನಂತೆ ನನ್ನಲ್ಲಿ.

ಭ್ರಮೆಯಲ್ಲಿ ಬದುಕುತಿರುವೆ ನನ್ನೆದುರು ಇಲ್ಲದಿರುವ ನಿನ್ನ ರೂಪ ನಾನೆಂದು ನೆನೆದು ನನ್ನಲ್ಲಿ.

ನನ್ನ ಹೆಸರ ಕರೆದಂತೆ ನೀನು ಪ್ರತಿಕ್ಷಣವೂ ಆಚೀಚೆ ನೋಡುವುದು ಅಭ್ಯಾಸವಾಗೋಯ್ತು ನಿನ್ನ ಸ್ಪರ್ಶ ಮನದ ಬಳಿ ಕಾಣದೆ ನುಗ್ಗಿ ಬಂದಾಗ.

ಮೆಲ್ಲಾ ಮೆಲ್ಲನೆ ಕಚ್ಚಿ ನಿನ್ನ ಉಸಿರು ಬೆಸುಗೆಯಾಕಿದೆ ಭಾನಂಚಿನ ನಿರಂತೆ ನನ್ನ ಹೃದಯದಲ್ಲಿ ರುದಿರದಂತೆ ಬದಲಾಗಿ.

ನಿನ್ನ ನೋಡಲು ಕಾದು ಕಾದು ನನ್ನ ಕಣ್ಣುಗಳು
ಬೆವರು ಸುರಿಸುತ ನನ್ನೊಳಗಿನ ಭಾವಸರದಿಯ
ಕಾಡಿ ಇಂದು ನನ್ನ ಜವಾಬು ಬೇಡುತಿವೆ ನನ್ನ ಪ್ರೀತಿಯ ರೂಪ ಬಚ್ಚಿಡಲು ನೀನ್ಯಾರು ಹೇಳೆಂದು ಸರ್ವಾಧಿಕಾರದಿ.

- ಚುಕ್ಕಿ

01 Nov 2017, 11:00 pm
Download App from Playstore: