ಸೋತ ಹೃದಯ
ಸೋತ ಮನಸುಗಳೆದುರು
ಗೆಲುವು ನೋಡಿ ನಕ್ಕಂತೆ
ನಗುವ ಜನರೆದುರು
ತಲೆ ಎತ್ತಿ ಬಾಳಬೇಕಂತೆ
ಕಣ್ಣ ಭಾಷೆ ತಿಳಿಯದ ಹೃದಯ
ಹತ್ತಿರವಿದ್ದು ದೂರಾದಹಾಗೆ
ಪ್ರೀತಿಸುವ ಮನಸುಗಳಿಗೆ ಕೊಡದ ಸಮಯ
ಎಲೆ ಇಲ್ಲದ ಒಣಮರದ ಹಾಗೆ!
ಕನಸು ಕಾಣುವ ಕಣ್ಣಿಗೆ
ಸೂಚನೆ ನೀಡಿದೆ ಮೆಲ್ಲಗೆ
ಮರೆಯಬೇಕಿರುವ ನೆನಪುಗಳ ಯಾತನೆ
ಸುಳಿಯಲು ಬಿಡದಿರು ಸುಮ್ಮನೆ!
ಕೋಪದಲಿ ಮನಸು ನೊಂದು ಪರಿತಪಿಸಿದೆ
ಪ್ರೀತಿಯೆಂಬ ಮಾಯಾಜಾಲದಲಿ ಸಿಲುಕಿ,
ಕಹಿನೆನಪುಗಳು ಮರೆಯಬೇಕಿದೆ
ಪ್ರೀತಿಸುವ ಜೀವಗಳ ಜೊತೆಯಲ್ಲಿ!
ಪ್ರಿಯಾಂಕ✍
- ಪ್ರಿಯಾಂಕ
02 Nov 2017, 08:21 pm
Download App from Playstore: