ಮುಗುಳು-ಮಗಳು
ಚಿಗುರುತಿದೆ ಒಡಲಲಿ ಮುಗುಳು
ನೀನಾಗಿರಲೆಂದು ಬೇಡುವೆ ಮಗಳು
ಕತ್ತಲ ಬಾಳಲಿ ನಗುವ ತಿಂಗಳು
ಮನೆಮನ ಬೆಳಗೋ ಬೆಳದಿಂಗಳು
ಹಣೆಗೆ ಚೆಂದದೊಂದು ಬೊಟ್ಟು
ಕಿವಿಗೋಲೆ , ಕಣ್ಣಿಗೆ ಕಾಡಿಗೆ ಇಟ್ಟು
ಬಣ್ಣಬಣ್ಣದ ಬಟ್ಟೆಯ ತೊಟ್ಟು
ನಲಿಯಬೇಕು ನೀ ಹರುಷಪಟ್ಟು
ಗೆಜ್ಜೆ ಕಟ್ಟಿ ಕುಣಿವ ನಿನ್ನ ಕಾಲಿಗೆ
ಬೇಡಿ ಹಾಕದೆ ಬಿಡುವೆ ಬಯಲಿಗೆ
ಹೆಣ್ಣಿನ ಬಾಳ ಚೆಲುವ ಕನಸ ದಾರಿಗೆ
ನೀನಾಗು ದಾರಿ ತೋರೊ ದೀವಟಿಗೆ
ಹೆಣ್ಣೆಂದು ನನ್ನ ಕನಸಿಗಾಕಿದರು ಕನ್ನ
ಎಂದೂ ನಿನಗೆ ಜೊತೆಯಾಗಿರುವೆ ಚಿನ್ನ
ಮುಟ್ಟಬೇಕು ನೀನು ಮಹಾ ಕನಸುಗಳ ಗಗನ
ನಾ ನೋಡಿ ನಲಿವೆ ಚುಕ್ಕಿಯಂತೆ ಮಿನುಗೋ ನಿನ್ನ
- ಶ್ರೀಕಾವ್ಯ
03 Nov 2017, 02:17 pm
Download App from Playstore: