ಹಾಲು ಜೇನ ಪ್ರೀತಿ

ಬದುಕಿನ ಬಿಗುಮಾನ
ನೀ ಅರಿತಿರುವೆಯಾ ಜಾಣ!!
ಕಾನನದಿ ಕಾಮನ ಬಿಲ್ಲ
ಕಂಡವನು ನೀನೇನಾ!!

ಮುನಿಸೆಂಬ ಗಾಳಿಗೆ ಇಂದು
ಸಿಲುಕಿರಲು ಸಂಸಾರ ನೌಕೆ!!
ಹೆದರದೆಯೇ ಕೈ ಪಿಡಿದು ನೀ
ಜೊತೆಯಾಗೆ ಸುಂದರ ಬದುಕು!!

ಕ್ಷಣಕಾಲ ನೊಂದರೂ ಕೂಡ
ಮರು ಕ್ಷಣವೇ ನಲಿವಿದೆ ನೋಡ!!
ನಗುತಿರಲು ದಿನವೂ ಹೀಗೆ
ಬೇಕಿಲ್ಲ ಬೇರೆಯ ಸ್ವರ್ಗ!!

ಬದುಕಲ್ಲಿ ಹುಣ್ಣಿಮೆ ಕಾಂತಿ
ತಂದಿಹುದು ಸುಂದರ ಪ್ರೀತಿ!!
ಜೊತೆ ಇರಲು ನಾನು ನೀನು
ಬೆರೆತಂತೆ ಹಾಲು ಜೇನು!!

- ಪಿ.ಜಿ.ಜ್ಯೋತಿ

04 Nov 2017, 06:56 am
Download App from Playstore: