ನಗು
||ಮನದ ಅಂಕು ಡೊಂಕ ತಿದ್ದಿಬಿಡುವುದಂತೆ
ಮೊಗದ ಮೇಲಿನ ಸವಿಯಾದ ಓರೆಕೋರೆ
ಅದಕ್ಕೆ ಇರಬಹುದೇನೊ ಬುದ್ಧನು ಒಪ್ಪಿಬಿಟ್ಟದ್ದು
ಮುಗುಳು ನಗೆಯ ಆಭರಣವ ತನ್ನ ಅಲಂಕಾರಕ್ಕೆ ||
||ಅವನ ಮುಗ್ಧವೆನಿಸಿದ ಮನವ ಕಂಡಾಗಲೆ
ಪ್ರೀತಿ ಸುನಾಮಿ ಶುರುವಾದದ್ದು ನನ್ನೊಳಗೆ
ನನ್ನೆದೆಯ ಭಾವಗಳ ಅಂತೆ ಕಂತೆಗಳೆಲ್ಲ
ಮುಳುಗಿ ಹೋಗಿ ನಗುವೇ ಮಾಯವಾಗಿ
ಮಣ್ಣಾಯಿತು ಅವನ ಪ್ರೀತಿ ಹೊಡೆತಕ್ಕೆ||
||ಅವಳ ಅರೆ ಬಿರಿದ ಹೂವ ನಗುವೇ
ದೀಪವೆನಿಸಿ ಬಿಟ್ಟಿತು ನನ್ನೆದೆ ಗೂಡಿಗೆ
ಕೂಗಿ ಕರೆದೆ ದೀಪದಂತವಳ ಬಂದೇ ಬಿಟ್ಟಳು
ಹೊತ್ತಿಸೇ ಬಿಟ್ಟಳು ಬೆಳಕು, ಕಳೆದು ನನ್ನೆಲ್ಲ ಕೊಳಕು||
- ಶ್ರೀಕಾವ್ಯ
04 Nov 2017, 07:59 am
Download App from Playstore: