ಚೆಲುವು-ಒಲವು

ಬಲು ಚೆಲುವು ನಿನ್ನ ಒಲವು
ಮಾಡಿದೆ ನನ್ನ ಮನಸನೇ ಕಳವು
ಖಾಲಿ ಹೃದಯದ ದೂರುದಾರನು ನಾನೀಗ
ದೂರು ಸ್ವೀಕರಿಸಿ‌ ಕೊಡುವೆಯಾ ನಿನ್ನೊಲವ ನೀನೀಗ

ನನ್ನೊಳಗೆ ನಾನೆ ಇಲ್ಲದಂತಾಗಿದೆ
ನನ್ನೊಳಗೆ ನನ್ನನೆ ಹುಡುಕುವಂತಾಗಿದೆ
ನನ್ನಲಿ ನಿನ್ನದೆ ಕನವರಿಕೆ ಶುರುವಾಗಿದೆ
ನಿನಗೆ ಅದರ ಪರಿವೆಯೇ ಇಲ್ಲದಾಗಿದೆ

ಏನಿದು ಈ ಪ್ರೀತಿಯ ಮೋಜಿನಾಟ
ತೆರೆಸಿದೆ ನನ್ನೊಳಗೆ ಕನಸಿನ ಹೂದೋಟ
ಮಕರಂದ ಹೀರೊ ಜೇನಿರದೆ ಬಾಡುತಿದೆ ತೋಟ
ಬಾರೆ ಗೆಳತಿ ಅರಿತು ನೀನಿರದ ನೋವು ಕೊಡುವ ಕಾಟ

ಪ್ರೀತಿಯ ಸೌಧ ಕಟ್ಟಿ ಕಾಯುತಿರುವೆ ನಿನಗಾಗೆ
ತಾಳಲಾರೆ ಮನಸ ಸುಡುತ್ತಿರುವ ನೋವಿನ ಬೇಗೆ
ಬಂದು ಬಿಡು ನನ್ನೆಡೆಗೆ ತಂಪೆರೆವ ತಂಗಾಳಿಯ ಹಾಗೆ
ಉಸಿರ‌ ಕೊನೆವರೆಗೆ ನಡೆವೆನು ನಾ ನಿನ್ನ ಜೊತೆಜೊತೆಗೆ

- ಶ್ರೀಕಾವ್ಯ

04 Nov 2017, 04:42 pm
Download App from Playstore: