ಮುಖವಾಡ ಕಳಚಿ

ಮುಖವಾಡ ಕಳಚಿ ತೋರಿ ನೀಚ
ಜನರೇ ನಿಮ್ಮ ನೈಜ ರೂಪಗಳನ್ನು.
ಮಾತಿನಲ್ಲಿ ಸವಿಯ ತುಂಬಿ ಮನದಲ್ಲಿ ವಿಷವಣಿರಿಸಿ ಏತಕ್ಕೆ ನಟಿಸುವಿರಿ
ಒಳ್ಳೆಯವರೆಂದು ನಮ್ಮನ್ನು ನಂಬಿಸಿ.

ಹೆತ್ತ ತಾಯಿಯ ಎದೆಗೆ ಒದೆಯುವ
ದುಸ್ಸಾಮಾಜ ದುರ್ಮಗರು ನೀವು.
ಬಾಳಿ ಬದುಕಿ ಮನುಷ್ಯತ್ವ ಹೊತ್ತು ಒಂದು ದಿನವಾದರು ಭೂ ತಾಯಿ ನಿಮ್ಮ ಕುತಂತ್ರಗಳ ಭಾರ ಹೊತ್ತು ಕೊರಗುತ್ತಿರುವುದಕ್ಕಾದರೂ.

ಪದಗಳಿಗೆ ಸಿಗದ ನಿಮ್ಮ ಸ್ವಾರ್ಥಪೂರಿತ ವ್ಯಕ್ತಿತ್ವಕ್ಕಾಗಿ ಏನೆಂದು ಬರೆಯಲಿ ಎಷ್ಟೆಂದು ಉಗಿಯಲಿ ಇಂದು ನಾನು ನಿಮ್ಮ ಕಂಡು ನನ್ನ ಕಣ್ಣಲ್ಲಿ.

ಕೋಪವನ್ನು ಕಟ್ಟಿ ಹಾಕಿ ಮನಸನ್ನು ಗಟ್ಟಿ ಮಾಡಿ ನಾಚಿಕೆಯಿಲ್ಲದೆ ನೀವು ಮಾಡುವ ಮೋಸಗಳಿಗೆ
ಒಂದು ಗಳಿಗೆ ನಡು ರೋಡಿನಲ್ಲಿ ನಿಲ್ಲಿಸಿ ನಿಮ್ಮ ಮಾನ ಮರ್ಯಾದೆಯನ್ನು ಹಾರಾಜು ಹಾಕಲೆ ಇನ್ನ ಮುಂದೆ ಬರುವ ಮೊಸಗಾರರಿ ಮನದಟ್ಟಾಗುವಂತೆ ಇನ್ನೊಂದು ಕಲ್ಮಶವಿಲ್ಲದ ನಿಸ್ವಾರ್ಥ ಮನಸು ನನ್ನಂತೆ ದುಃಖಿಸದಂತೆ ಇಂದು

- ಚುಕ್ಕಿ

05 Nov 2017, 09:06 am
Download App from Playstore: