ಹೆಣ್ಣು

ವರ್ಣಿಸಲಾಗದ ಕಲ್ಪಿತ ಸುಂದರಿ ಹೆಣ್ಣು.
ಮನೆಯ ಕತ್ತಲಿನ ದೀಪ ಬೆಳಗಿಸುವ ಕಣ್ಣು..
ಮೊಳಕೆಯೋಡಸಿ,ನೀರುಣಿಸಿ ಜೀವ ಕೊಡುವ ಮಣ್ಣು...
ತಾಳ್ಮೆಯ-ಬಾಳ್ವೆಯ ಕಲಿಸುವ ಸಿಹಿಯಾದ ಹಣ್ಣು....
ಒಲುಮೆಯ-ಚಿಲುಮೆಯ ಪಲವತ್ತತೆಯ ಕೆಮ್ಮಣ್ಣು.....

ಒಂದೂರಲ್ಲಿ ಹುಟ್ಟಿ ಮತ್ತೊಂದುರಲಿ ಜೀವ ಕೊಡುವ ಭೋಗಿ.
ಸೌಂದರ್ಯ ಧಾರೆಯರೆದು ಸುಖವ ಕೊಡುವ ತ್ಯಾಗಿ..
ಜೀವನದ ಮೊದಲ ಪಾಠ ಕಲಿಸುವ ಗುರುವಿನಂತಿರುವ ಯೋಗಿ..
ಪುರುಷ -ಪ್ರಪಂಚಕೆ ತಗ್ಗಿ ಅಂಜಿ ನೆಡೆಯುವವಳು ಭಾಗಿ..
ನೋವು-ನಲಿವು ನುಂಗಿ ಜೀವ ಕೊಡುವಳು ಕೂಗಿ...

ಉಂಗುರ,ತಾಳೆ,ಬಳೆ ತೊಟ್ಟು ಪತಿಗೆ ಸತಿಯಾಗಿರುವವಳು..
ಸೀರೆ ,ಕುಬಸ ಉಟ್ಟು ದೇಹ ಮುಚ್ಚಿ ರತಿಯಾಗಿರುವವಳು..
ಕಠಿಣ ಪರಸ್ಥಿತಿಯಲ್ಲೂ ಧೈರ್ಯ ತುಂಬಿ ಜೊತೆಯಾಗಿರುವವಳು..
ಸ್ನೇಹ,ಪ್ರೀತಿ,ವಾತ್ಸಲ್ಯಕೆ ಸುಸಂಸ್ಕೃತ ಕಥೆಯಾಗಿರುವವಳು..
ಇಷ್ಟಿದ್ದರೂ ಒಮ್ಮೆಮ್ಮೆ ಕುತ್ತಿಗಿಗೆ ಹಗ್ಗ ತರುಲು ಮತಿಗೆಟ್ಟಿತಿರುವವಳು!

- ಆರ್. ಎಸ್ .ಸುಗ್ಗಿ

05 Nov 2017, 11:27 am
Download App from Playstore: