ಬಂದೆ ಬರುವೆ
ಕಾಡುಮೇಡು,ಬೆಟ್ಟಗುಡ್ಡಗಳ ನಡುವೆ
ನಾ ದೇಶಕಾಯೊ ಕಾಯಕದ ಮೇಲಿರುವೆ
ಕ್ಷಣ ಕ್ಷಣವೂ ನಿನ್ನ ನೆನಪಲೆ ಬೇಯುವೆ
ನನ್ನೊಲವಿನ ಹೂವೆ ಪ್ರೀತಿಯ ಚೆಲುವೆ
ಅಪರೂಪಕೆ ಬರುವ ನಿನ್ನ ಪ್ರೇಮಪತ್ರ
ನೀನೆನೆ ಬಂದು ನಿಂತಂತೆ ಮಾಡುವುದು ಹತ್ರ
ನನ್ನೆತ್ತವರಿಗೆ ನೀನಲ್ಲ ಬರಿ ಸೊಸೆ ಮಾತ್ರ
ತುಂಬುಬಿಡು ಅವರಿಗೆ ಮಗ ಮಗಳ ಪಾತ್ರ
ಕರುಳಕುಡಿಳಿಗೆ ಅಪ್ಪ ಅಮ್ಮ ಎರಡು ನೀನೆ
ಅಲ್ಲಿ ಎಲ್ಲರೂ ಸೌಖ್ಯದಿಂದಿರುವರು ತಾನೆ?
ನಾನು ನೆನಪಾಗಿ ನಿಮಗೆಲ್ಲ ಕಾಡುವೆನೇನೆ?
ಕ್ಷಣಕ್ಷಣ ಕಾಯುವೆ ನಾ ಮುಂಬರುವ ರಜೆಗೇನೆ.
ನಿಂತಲ್ಲು, ಕುಳಿತಲ್ಲೂ ನನಗೆ ನಿಮದೇ ನೆನಪು
ನೆನಪು ಕದ್ದು ಬಿಡುವುದು ನನ್ನ ಕಣ್ಣ ಹೊಳಪು
ಜೀವ ಪಣವಿಟ್ಟು ಎನ್ನಮ್ಮನ ಕಾಯುತಿರುವೆನು
ಕಾಪಾಡೊ ದೈವವಿದೆ ಕಾಯುತಿರಿ ನಾ ಬಂದೆ ಬರುವೆನು
- ಶ್ರೀಕಾವ್ಯ
05 Nov 2017, 02:39 pm
Download App from Playstore: