ಪಂಜರದ ಪಕ್ಷಿ...
ನಾನೊಂದು ಪಂಜರದ ಪಕ್ಷಿ
ಕೇಳುವವರ್ಯಾರಿಲ್ಲ ನನ್ನ ಕಥೆಯ
ಅಸೂಯೆಪಟ್ಟ ನನ್ನ ಗೆಳತಿಯರೆ
ತಿಳಿಯಲಾಗದು ನನ್ನೊಡಲಿನ ವ್ಯಥೆಯ!
ನನ್ನ ಚೆಲುವಿಗೆ ಮಾರುಹೋಗಿ
ಬಲೆ ಬೀಸಿದರು ದುಷ್ಟ ಮನುಜರು
ಸ್ವಚ್ಚಂದವಾಗಿ ಹಾರಾಡುತ್ತಿದ್ದ ನನ್ನನು
ಪಂಜರದಲಿ ನೂಕಿದ ಕಟುಕರಿವರು!
ಹೊತ್ತು ಹೊತ್ತಿಗೂ ಉಪಚಾರ ಮಾಡಿ
ಅವರ ಭಾಷೆಯನು ಕಲಿಸಿಬಿಟ್ಟರಲ್ಲಾ..
ಅರ್ಥವಾಗದ ಈ ಮನುಜರ ಎದುರು
ಕಣ್ಣುಮಿಟುಕಿಸಿ ಮಾತಾಡಬೇಕಲ್ಲಾ...
ನೋವಿನ ಕಣ್ಣೀರ ಬಿಂದುಗಳ ಜೊತೆ
ಚೆಲ್ಲಾಟ ಆಡಿ ನಗುವರಿವರು
ಭಾವನೆಗಳ ಜೊತೆ ಕನಸುಗಳ ಕೊಂದು
ಹಣ ಸಂಪಾದಿಸುವ ದುರುಳರಿವರು!
ಪ್ರಿಯಾಂಕ✍
- ಪ್ರಿಯಾಂಕ
05 Nov 2017, 08:55 pm
Download App from Playstore: