ಪತಂಗ

ಸುಡುವ ಬೆಂಕಿಯ ಮುಟ್ಟಿ
ರೆಕ್ಕೆ ಸುಟ್ಟರು ಬಿಡದೆ
ಮತ್ತೆ ತುಡಿವ ಪತಂಗವ
ನೀ ಹಿಡಿದಿಡಲು ಉಂಟೇ ?

ಸುರಿವ ಮಳೆ ಸುಂದರವೆಂದು ನಂಬಿ
ರೆಕ್ಕೆ ಬಿಚ್ಚಿ ಹಾರುವ ಮಳೆ ಹುಳವ
ಮಳೆಯಿಂದ ರಕ್ಷಿಸಲು ರಹದಾರಿಯುಂಟೆ ?

ಕೂಗಿ ಕರೆವುದು ಕಪ್ಪೆ
ಹಿಡಿದುಣ್ಣುವ ಹಾವಿನದು ತಪ್ಪೇ ?
ಬರಿದೇ ಬಸವಳಿಯದಿರು
ಸಕಲವನು ಸರಿಪಡಿಸುವೆನೆಂದು ಬೆಪ್ಪೆ.

ತನ್ನ ತಾನರಿಯದ ಮನಕೆ
ಸುಮ್ಮನೆ ಚುಚ್ಚುವುದು ಸ್ವಾರ್ಥದ ಗರಿಕೆ,
ಎಡವಿದ ಕಲ್ಲು ನೂರಿರಲು
ಅಡವಿಯ ಬಂಡೆಗೆ ತಲೆ
ಚಚ್ಚಿಕೊಂಡರೆ ಎಂತಯ್ಯ ?

- ಶ್ರೀಗೋ.

05 Nov 2017, 09:25 pm
Download App from Playstore: