ಕೈ ತುತ್ತು

ಮಾಡಿ ಬಡಿಸಿದಳು ಚೆಲುವಿ
ಅಮೃತ ತುಂಬಿದ ಒಲವ
ಹಾಲಿನ ಬಿಸಿ ಬಿಸಿ ಪಾಯಸ
ಸವಿದರೆ ಮುಗಿಯದ ಸಂತಸ.
ಅನ್ನ ಸಾರು ಉಪ್ಪಿನಕಾಯಿ
ಚಪ್ಪರಿಸಲನುವಾಯ್ತು ಬಾಯಿ

ಜೊತೆಗೆ ಇತ್ತು ಮೃದು ಉದ್ದಿನ ವಡೆ
ಕುಡಿ ನೋಟ ಬಿರುತಿದ್ದಳು
ಹಾಕಿ ಜೋಡಿ ಜಡೆ
ನೀಡಿದಳು ಅಮ್ಮನಂತೆ ಕೈ ತುತ್ತು
ಸವಿದವರಿಗೇ ಅದರ ರುಚಿ ಗೊತ್ತು.

ಮಾಡಿ ಕೊಟ್ಟಳೆನ್ನ ಮುದ್ದು
ಹಬೆಯಾಡುವ ಕಾಫಿಯ ಖುದ್ದು
ಬಿಸಿಯ ತಣಿಸಿ ಕೊಂಚ ನಗಿಸಿ
ಮುಸಿ ನಗುವಿನ ಸಿಹಿಯ ಉಣಿಸಿ.

ಕೊನೆಗೆ ಕೈಯ ಮೇಲೆ ಕೈಯನಿತ್ತು
ಕೆನ್ನೆಗೆ ಕೊಟ್ಟಳೊಂದು ಸಿಹಿ ಮುತ್ತು
ಅವಳ ಹೂವ ದೇಹ ನನಗೊರಗಿತ್ತು
ನನ್ನ ಕಣ್ಣಲ್ಲಿ ಹನಿಯೊಂದು ತುಂಬಿತ್ತು !

ಎಂತು ವರ್ಣಿಸಲಿ ಮುದ್ದು ಹುಡುಗಿಯ
ಪ್ರೀತಿ ವಾತ್ಸಲ್ಯ ಮಮತೆ ಮೂರ್ತಿಯ
ನಿನ್ನ ದೊಡ್ಡ ಪ್ರಪಂಚದೊಳು ಇರುವೆನು ನಾನು,
ನನಗೋ ದೊಡ್ಡ ಪ್ರಪಂಚವೇ ನೀನು !

- ಶ್ರೀಗೋ.

06 Nov 2017, 06:21 am
Download App from Playstore: