ಬೆಳಕಾಗು ನೀ
ನನ್ನೆದೆಯಲಿ ದೀಪವ ಬೆಳಗಿದ ಸಮಯ
ಕಗ್ಗತ್ತಲು ಮಾಯವಾಯಿತು
ಆರದ ದೀಪವಾಗಿರಲಿ ನೀ ಹಚ್ಚಿದ ದೀಪ
ದಿನ ನಿತ್ಯ ಪ್ರೀತಿಯ ಎಣ್ಣೆ ಸುರಿಯುತಿರು
ಹೃದಯದ ಗೂಡಿನಲ್ಲಿ ಗಾಳಿಗೂ ಪ್ರವೇಶವಿಲ್ಲ.
ನಿನ್ನುಸಿರಿಗೂ ಆರದಂತೆ ಮೆದುವಾಗಿ ಉಸಿರಾಡು
ಆ ಸೂರ್ಯ ಚಂದ್ರನು,ಮಿನುಗೊ ತಾರೆಯು ನಾಚಬೇಕು
ನೀ ಬೆಳಗಿದ ದೀಪದ ಬೆಳಕಿಗೆ ,
ಜಗವೆಲ್ಲ ಕತ್ತಲಾದರೂ
ನೀ ನನ್ನ ಜೊತೆಗಿರಬೇಕು ಬೆಳಕಿನಂತೆ
ಈ ಜನುಮದಲ್ಲದಿದ್ದರು ಮರು ಜನ್ಮದಲ್ಲಿ
ನೀ ನನ್ನ ಮನೆಯ ದೀಪ ಬೆಳಗಬೇಕು
ಪ್ರತಿವರ್ಷದ ದೀಪಾವಳಿಯ ದೀಪ ನೀನಾಗಬೇಕು
ಈ ಜಗದಲ್ಲಿ ನನ್ನದೆನ್ನುವುದು ಏನು ಇಲ್ಲ
ಇಂದು ನನ್ನದು ನಾಳೆ ಇನ್ಯಾರದ್ದೋ
ಈ ಜನ್ಮದಲ್ಲಿ ನೀ ದೂರವಾದೆ
ಮರುಜನ್ಮದಲ್ಲಿ ಜೊತೆಯಾಗು
ಎಂದೆಂದೂ ನನ್ನ ಬಾಳಿನ ಬೆಳಕಾಗು
- ನಾಗರಾಜ್
06 Nov 2017, 08:36 am
Download App from Playstore: