ನೆನಪು
ನಲಿವು ತುಂಬಿದ ನಿನ್ನೆಗಳು
ಭರವಸೆಯಿಲ್ಲದ ನಾಳೆಗಳು
ಏರಿಳಿತದ ಇಂದಿನ ನೋವ ದಿನಗಳು
ಮರೆಯಲಾರೆ ನಿನ್ನೊಂದಿಗಿನ ಕ್ಷಣಗಳು
ಕಾಪಾಡುವ ಕರವು ಕಾಣದಾಯ್ತು
ನೆಚ್ಚಿದ ನಲಿವು ಸಿಗಯಾಯ್ತು
ಒಲಿದ ಒಲವು ಕಣ್ಮರೆಯಾಯ್ತು
ನಗುವೆಂಬುದು ಮರೀಚಿಕೆಯಾಯ್ತು
ಹರಿವ ಕಣ್ಣೀರಿಗೆ ಆಣೆ ಅಣೆಕಟ್ಟು ಕಟ್ಟಿದೆ
ನೀನಿತ್ತ ಪ್ರೀತಿ ಗೂಡು ಮನದಲಿದೆ
ನಿನ್ನ ನೆನಪು ನನ್ನ ಉಸಿರಾಗಿದೆ
ಆ ಉಸಿರಿಲ್ಲದೆ ತನುವಿಗೆ ಜಗವೆಲ್ಲಿದೆ
ತನುವಿಲ್ಲಿದೆ ಮನ ನಿನ್ನಲಿದೆ
ನೀ ಸನಿಹವಿರದ ಜೀವ ಜಡವಾಗಿದೆ
ಕಡಲ ತೀರದ ಕಲ್ಲು ನಾನಾಗಿರುವೆ
ಅಲೆಗೆ ಅಲುಗದೆ ನವೆಯುತಿರುವೆ
*ರತ್ನಾ ಬಡವನಹಳ್ಳಿ*
- ರತ್ನಾಬಡವನಹಳ್ಳಿ
07 Nov 2017, 09:32 am
Download App from Playstore: