ನಂಬಿಕೆ
ಕಂಕಳಲಿ ಮಗು
ಬಿಕ್ಕಿ,ಬಿಕ್ಕಿ ಅಳುತಿದೆ
ಕುಡಿಯಲು ಹಾಲಿಲ್ಲ
ನಿಲ್ಲಲು ನೆರಳಿಲ್ಲ
ಆದರೂ.....
ಅಮ್ಮನ ತೆಕ್ಕೆಯ ಮರೆತಿಲ್ಲ
ಮೃಷ್ಟಾನ್ನವ ಬಸಿದು
ಬಿಸಾಡುತಿಹರು ತಿಪ್ಪೆಗೆ
ತುತ್ತನ್ನ ನನಗಿಲ್ಲ
ನಂಬಿಕೆಯುಂಟು ನನ್ನವ್ವ
ನನ್ನ ಮರೆತಿಲ್ಲ, ಮರೆಯೊಲ್ಲ
ದಾರಿಹೋಕರು ನಾವು
ದಾರಿಯೇ ತಿಳಿದಿಲ್ಲ ಎಲ್ಲಿಗೆಂದು
ಗುಡಿಮಂಟಪ ಮರದಡಿಯೇ ಹಾಸಿಗೆ
ಹೇಳಲು ಊರಿಲ್ಲ, ಕೂರಲು ಸೂರಿಲ್ಲ
ಆದರೂ.........
ಅಮ್ಮನ ಕೈಹಿಡಿದು ನಡೆಯುವುದು
ಮರೆಯೊಲ್ಲ, ಮರಿತಿಲ್ಲ
ಕಣ್ಣು ಮಂಪರಾಗುತಿದೆ
ಕರುಳಿನ ಬೇನೆಗೆ
ತಡೆಯಲಾಗುತ್ತಿಲ್ಲ ಸಿರಿವರ
ಬಿಸಿಲ ಧಗೆಗೆ
ಬೇಯುತಲೂ, ನಲಿಯುತಿಹೆವು
ನಿನ್ಗೆಲುವಲಿ...
ನಿನ್ನಾ ಆಶಾಕಿರಣ ಎಂದುದಯಿಸುವುದೋ
ನಮ್ಮ ಬಾಳನೆಂದು ಬೆಳಗುವುದೋ
ಆದರೂ......
ಚಿಂತೆಯಿಲ್ಲ, ಮಕ್ಕಳ ಮರೆತು ತಾಯಿ
ನಿದ್ರಿಸುವುದು ನಾನೆಂದು ಕಂಡಿಲ್ಲ.......ಡಿ.ಸಿ..
- ಡಿ.ಸಿ.ನಾಗೇಶ್
07 Nov 2017, 06:41 pm
Download App from Playstore: