ನಂಬಿಕೆ ಮಾರಾಟಕ್ಕಿದೆ
ನಂಬಿಕೆ ಮರಾಟಕ್ಕಿದೆ
ಕೊಳ್ಳುವವರಿಲ್ಲದೆ ಕೊಚ್ಚೆಯಲ್ಲಿ ಬಿದ್ದಿದೆ
ಯಾರಿಗೂ ಬೇಕಿಲ್ಲದೆ
ಬಣ್ಣ ಕಳೆದುಕೊಂಡು ಬಡವಾಗಿದೆ.
ಸುಳ್ಳುಕೋರರ ಸಂತೆಯಲ್ಲಿ,
ಬೋರಲು ಬಿದ್ದು ಹೆಣವಾಗಿದೆ.
ಹೆಣ ಹೊರುವ ಬುಜಗಳಿಗೆ
ಹೊರಲಾರದಷ್ಟು ಮಣ ಭಾರವಾಗಿದೆ.
ಸ್ನೇಹಿತರ ನಡುವೆ ನೀತಿಗೆಟ್ಟು
ನಯವಂಚನೆಯ ಮಂಚದಲ್ಲಿ ಮತಿಗೆಟ್ಟು
ಹೊರಳಾಡಿದೆ,
ದುಷ್ಟ ದುರುಳರ ಸಂಗವ ಮಾಡಿ
ದಾರಿ ತಪ್ಪಿ ಎಲ್ಲೆಲ್ಲೋ ನರಳಾಡಿದೆ.
ಬೆಲೆ ಕಳೆದುಕೊಂಡ ನಂಬಿಕೆ
ನೆಲೆ ಇಲ್ಲದೆ ಅಲೆಯುತ್ತಿದೆ ಚೆಂದಕೆ
ಬೇಕಿಲ್ಲ ಯಾರಿಗೂ, ಉಳಿಸಿಕೊಳ್ಳುವ ಹಂಗಿಲ್ಲ
ಅದಕ್ಕಾಗಿಯೇ ನಂಬಿಕೆ ಯಾರಲ್ಲೂ
ಇದುವರೆಗೂ ತಂಗಿಲ್ಲ !
- ಶ್ರೀಗೋ.
07 Nov 2017, 09:47 pm
Download App from Playstore: