ದೇವತೆ ನನ್ನ ಸಂಗಾತಿ
ದೇವತೆ ನನ್ನ ಸಂಗಾತಿ ಜೀವಕ್ಕೆ
ಹೆಸರಾದ ಸೊಗಸಾದ ಜೊತೆಗಾರ್ತಿ
ತಾಯಿಯಂತೆ ಮಮತೆ ತೋರುವಳು
ಗೆಳತಿಯಂತೆ ಆರೈಕೆ ಮಾಡುವಳು.
ಪ್ರತಿನಿತ್ಯ ಮನತಣಿಸುವಳು
ಮುದ್ದಾದ ಮಾತುಗಳಿಂದ ನನ್ನೊಡತಿ.
ನಂಬಿಕೆಗೆ ಇನ್ನೊಂದು ಹೆಸರಾಕೆ
ಪ್ರೀತಿಗೆ ಪ್ರತ್ಯೇಕ್ಷ ರೂಪವಾಕೆ.
ನನ್ನ ಹೃದಯದ ಗುಡಿಯಲ್ಲಿ
ಪ್ರೀತಿಯ ಹಣತೆ ಹಚ್ಚಿ
ದಿನನಿತ್ಯ ನನ್ನ ನಗುವನ್ನು ಕಾಯುವವಳು
ನೀನೇ ಚೆಲುವೆ ನನ್ನ ಒಲವಿನ ಮನವೇ.
ಸಮಯದ ಪರಿವೆಯೇತಕೆ ಸಂಗಾತಿ
ನಿನ್ನೆದುರು ಕುಂತಾಗ
ನನಗೆ ನಿನ್ನ ಕಣ್ಣಲ್ಲಿನ ನನ್ನ ರೂಪ
ಸಾಲದೆ ಜೀವನದಾದ್ಯಂತ ನಿನ್ನೊಡನೆ ನಾ ಬಾಳಲು
ತಂಪಾದ ನಿನ್ನ ಚುರುಕು ನೋಟಕ್ಕೆ ಸಿಲುಕಿ
ಬಿಡಿಸಲಾಗದ ನಂಟು ಇರುವಾಗ.
- ಚುಕ್ಕಿ
08 Nov 2017, 08:00 pm
Download App from Playstore: