ಅವತಾರ ಪುರುಷ
ಇಳೆಗಿಳಿದು ಬಾರನೇನು
ಧರೆಯೊಡೆಯನು
ದಾಸಾನು ದಾಸರಿದ್ದರೂ
ಮೊರೆ ಕೇಳನು
ಅವತಾರ ಪುರುಷನು
ಅವತಾರಗಳ ಮರೆತನೇನು
ಜಡದಂತೆ ಕೂತು
ಜಪ ಮಾಡುತಿಹನೇನು
ಕೋಟ್ಯಾಂತರ ಮಂದಿಯೆಲ್ಲ
ಕರೋಡ್ ಪತಿಗಳೇನಲ್ಲ
ಸ್ವಾತಂತ್ರ್ಯ ದೀಪ ಬೆಳಗಿದರು
ದಾಸ್ಯದ ಮಾಯೆ ಮಾಸಿಲ್ಲ
ತುತ್ತಿಲ್ಲ, ಅಮ್ಮನ ಪ್ರೀತಿ ಮುತ್ತಿಲ್ಲ
ನೆರಳಿಲ್ಲ, ನೋವೇಳಲು ಜಗವಿಲ್ಲ
ಗುರುವಿಲ್ಲ, ಗುರಿಯಮಗೆ ತಿಳಿದಿಲ್ಲ
ನಲಿವಿಲ್ಲ, ನಾಖದಪಾಡೆ ಜಾಡೆಲ್ಲ
ಬಡವನ ಬೇನೆಗೆಂದು ಕೊನೆಯು
ಕಣ್ಣೀರೇ ತುಂಬಿದೆ ಕನಸಲ್ಲೇ ನಲಿದಿದೆ
ಆಸೆಗಳ ಭಾವಕೆರಳಿ ಮಂಕಾಗಿ ಮುಖಾಗಿದೆ
ಧರೆಗಿಳಿದು ಬಂದರೇನು, ಇಳೆಯೊಡೆಯನು
ದಾಸಾನು ದಾಸರಿದ್ದರೂ ಹಿಂತಿರುಗಿ ನೋಡನು
..................ವಂದನೆಗಳು...................ಡಿ.ಸಿ
- ಡಿ.ಸಿ.ನಾಗೇಶ್
09 Nov 2017, 10:54 am
Download App from Playstore: