ಕೂಡದಿರು ಮನಸೇ......
ಕೂಡದಿರು ಮನಸೇ ನೀ ಕೈಯನ್ನ ಕಟ್ಟಿಕೊಂಡು,
ಸುಮ್ಮನಾಗದಿರು ಎಂದೂ ನೀ ಸೋಲನ್ನ ನೆಚ್ಚಿಕೊಂಡು,
ನಿನ್ನ ಬಳಿ ಓಡಿಬರುವುದು ಗೆಲುವು, ನಿನ್ನ ಪರಿಶ್ರಮನ ಮೆಚ್ಚಿಕೊಂಡು.
ಸುಮ್ಮನೆ ಮುನ್ನುಗ್ಗುವುದೊಂದೇ ನಿನ್ನ ಕಾಯಕ,
ಏನೇ ಆದರೂ ಕಾಪಾಡ್ತಾನೆ ಆ ವಿನಾಯಕ,
ಸೋಲೇ ಗೆಲುವಿನ ದಾರಿಸೂಚಕ,
ಗೆದ್ದಾಗ ಇಡೀ ಲೋಕವೇ ಆಗುವುದು ನಿನ್ನ ಸೇವಕ.
ಪ್ರಯತ್ನಿಸುವುದೊಂದೇ ಆಗಲಿ ನಿನ್ನ ಮಂತ್ರ,
ನಿನಗೇನೂ ಮಾಡಲಾಗದು ಬೇರೆಯವರ ಕುತಂತ್ರ!
ಮುಳ್ಳಿಲ್ಲದ ಗುಲಾಬಿ ಸಿಗುವುದೆಲ್ಲಿ?
ನೋವಿಲ್ಲದ ನಲಿವು ಬರುವುದೆಲ್ಲಿ???
ಸಣ್ಣವನಾಗಿದ್ರೂ ದೊಡ್ಡದಾಗಿ ಯೋಚಿಸು,
ನೀನಾರೆಂಬುದನ್ನ ಕೆಲಸದಲ್ಲಿ ತೋರಿಸು.
ನಂಬದಿರು ಎಂದೂ ನೀ ಅವರಿವರು ಹೇಳುವ ಜ್ಯೋತಿಷ್ಯವನ್ನ,
ನಿನ್ನಿಷ್ಟದಂತೆ ರೂಪಿಸುಕೋ ನಿನ್ನ ಭವ್ಯ ಭವಿಷ್ಯವನ್ನ!!!
- ರಜತ
09 Nov 2017, 11:10 am
Download App from Playstore: