ಕಪಟ
ಇಲ್ಲಿ ಬರೀ ಕಪಟತನವನ್ನೇ ನೋಡಿದೆ,
ಇನ್ನಿಲ್ಲಿ ಬರುವುದಿಲ್ಲ ಲೋಕದಲ್ಲಿನ
ಕುತಂತ್ರಿಗಳ ಸೇನೆಯೆಲ್ಲಾ ಒಂದೆಡೆ ಸೇರಿ
ಬೀಗುತಿದೆ ಸ್ವಾರ್ಥದ ಅಟ್ಟಹಾಸದಲ್ಲಿಂದು.
ಕಂಬನಿಯ ಅಭಿಷೇಕಗೈದರು ಕಲ್ಲಿನಂತಹ ಘೋರ ಮನುಷ್ಯರ ನೆರಳಿಗೂ ಅದು ತಾಗುತಿಲ್ಲ ಈ ನರಕದಲ್ಲಿ ನೀವೇ ನೆಲೆಯಾಗಿರಿ ನೊಂದ
ಮನಸುಗಳ ಶಾಪಗಳ ಮೂಟೆಯೊತ್ತು ನಿಮ್ಮ
ಹಾಸಿಗೆಗಳ ಮೇಲೆ ಸುರಿದುಕೊಳ್ಳಿ ಇನ್ನಿಂದ
ರಾಕ್ಷಸ ರಾಜ್ಯವೆಂದು ಈ ವಿಸ್ಮಯ ನಗರಿಯಲ್ಲಿ.
- ಚುಕ್ಕಿ
09 Nov 2017, 07:48 pm
Download App from Playstore: