ನಯನ
"ಕತ್ತಲೆಯೇ ಕವಿದ ಈ ನಯನಗಳಿಗೆ
ನಿನ್ನ ಜಿಂಕೆ ಕಣ್ಣಿನ ಮುಗ್ಧ ಸ್ನಿಗ್ಧ ನೋಟ
ಸಿಕ್ಕಾಗಲೆ ಗೆಳತಿ ಬೆಳಕ ಕಂಡಂತೆನಿಸಿ
ಅಮಾವಾಸ್ಯೆಯಂತ ಮನಸಿನ ಅಂಗಳಕೆ
ಬೆಳದಿಂಗಳೇನೆ ಬಂದು ಸುರಿದಂತಾಗಿದ್ದು"
"ತೆರೆದಂಗಳದಿ ನೀ ನಿಂತು
ಚಂದ್ರನ ನೋಡಿ ಚುಕ್ಕಿ ಎಣಿಸಿ
ನಗುವಾಗ ಸಿಗುವ ಆ ಗುಳಿಕೆನ್ನೆ ಅಂದ
ಚಂದ್ರನೇ ಮೈ ಮರೆವ ನಯನಗಳ ಹೊಳಪ
ಕಂಡಾಗ ಅನಿಸದಿರುವುದೇ ಹೇಳು ಗೆಳತಿ
ಏನು ಕೊಟ್ಟರು ಸಿಗದ ಹರುಷ ಕೊಡುವ
ಆ ಚಂದ್ರ ಚುಕ್ಕಿಯಾದರು ನಾನಾಗಬಾರದಿತ್ತೆಂದು"
"ನಕ್ಕು ಬಿಡು ಒಮ್ಮೆ
ಮುತ್ತುದುರಿ ಹೋದಂತೆ
ಉದುರಿದ ಮುತ್ತು ಕಣ್ಣ ಕೋರೈಸುವಂತೆ
ಈ ಬಡಪಾಯಿ ನಯನಗಳಿಗೆ
ಅದೇ ಚಿನ್ನಾಭರಣಗಳ ಸಂತೆ
ಮರೆತುಬಿಡುವೆ ನನ್ನೆಲ್ಲ ಅಂತೆ ಕಂತೆ"
- ಶ್ರೀಕಾವ್ಯ
09 Nov 2017, 09:49 pm
Download App from Playstore: