ಕಲ್ಪನೆ
ಕವಿ ಕಲ್ಪನೆಯಿದು ನೋಡು ಮನಸೆ
ಹೃದಯದ ಬಾಗಿಲು ತೆಗದು ನೋಡು ಕನಸೆ
ಕಲ್ಲಲಿ ಶಿಲೆಯನು ಅರಳಿಸಬಲ್ಲ
ಶಿಲೆಯಲಿ ಜೀವವ ತುಂಬಬಲ್ಲ...
ಹೂವಿನಲಿ ಅಂದವ ಅರಳಿಸಬಲ್ಲ
ಅಂದದ ಹೆಣ್ಣಿಗೆ ಹೋಲಿಸಬಲ್ಲ...
ರವಿ ಕೇವಲ ಸುಡುವವನಲ್ಲ.
ಭೂಮಿಗೆ ಬೆಳಕಿನ ಕಿರಣವ ತೂರುವನಲ್ಲ
ಒಲವಿಂದ ಬುವಿಗೆ ಬೆಳಕನು ನೀಡುವನಲ್ಲ...
ಸೂರ್ಯ ರಶ್ಮಿಯು ಇಳೆಯ ತಬ್ಬಲು ಯಾವ ಹೋಲಿಕೆ ಸರಿಸಾಟಿಯಿಲ್ಲ...
ಚಂದಿರ ಕೇವಲ ಗ್ರಹವಲ್ಲ
ಹುಣ್ಣಿಮೆ ಚಂದ್ರನ ಅಂದಕೆ ಹೆಣ್ಣಿನ ನಾಚಿಕೆ ಬೆರಸಿಹನಲ್ಲ
ಚಂದಿರನಂದಕೆ ಕವಿ ಕಾವ್ಯದ ಹೋಲಿಕೆ ಯಾವ ಉಪಮೆಗೂ ಕಡಿಮೆ ಇಲ್ಲ...
ಮರ ಗಿಡಗಳು ಕೇವಲ ಕಾನನವಲ್ಲ
ಹಕ್ಕಿಗಳಿಗದು ಕೇವಲ ರಕ್ಷೆಯ ಗೂಡಲ್ಲ
ವನರಾಶಿಯ ಸೊಬಗಿನ ದೃಶ್ಯಕೆ ಯಾವ ಕಲಾಕಾರನ ಕುಂಚಕೂ ನಿಲುಕದ ಜೀವಂತಿಕೆ ತುಂಬಿಹುದಲ್ಲ...
ಹೂವಿನಂದ ದುಂಬಿಗಂದ
ಪ್ರಕೃತಿಯ ನೋಟ ಮನಕಾನಂದ
ಹಕ್ಕಿಯ ಹಾಡು ಕರ್ಣಾನಂದ
ಕವಿ ಮನಸಿನ ಕಲ್ಪನೆಯು
ಭಾವುಕ ಮನಕೆ ಪರಮಾನಂದ...
- ನಾಗರಾಜ್
10 Nov 2017, 08:16 am
Download App from Playstore: