ಪ್ರೇಮ ಸುಳಿವ ಜಾಡು
ಹರೆಯ ತೆರೆಯ
ನೀಳ ಜಡೆಯ
ನಲ್ಲೆ ನಗೆಯ
ಹಲವು ಬಗೆಗೆ ಮಾರುಹೋದೆ;
ಮುಗ್ಧ ಹೃದಯ
ಕಣ್ಣ ಸೆಲೆಯ
ನಲ್ಲೆ ಕಲೆಯ
ಪ್ರೀತಿ ಬಲೆಗೆ ಸೋತು ಹೋದೆ;
ಒಲವ ಬಯಸಿ
ಜಗವ ಮರೆಸಿ
ನನ್ನ ಹರಸಿ
ಬಳಿಗೆ ಸುಳಿದು
ಮರೆತ ಸಾಲುಗಳು ಮರೆಯಾದರೂ,
ಮರು ಬರುವ ಪದ ಪುಂಜಗಳಲ್ಲಿ
ನಿನ್ನ ಪ್ರೇಮದ ಬೆಳಕು ನೀಡು;
ನಡೆಯ ಚೆಲುವು
ನುಡಿಯ ಗೆಲುವು
ಮನದ ನಿಲುವು
ಕನಸು ಹಲವು
ನಿನ್ನ ನಲಿವಿಗೆ ಒಲಿದು
ಹಗಲಿರುಳು ಹಾಗೆ ಕಳೆದೆ ಸಖಿ,
ಕಂಡು ನಿನ್ನ ಪ್ರೇಮ ಸುಳಿವ ಜಾಡು.
ಏಕಾಂತಪ್ರಿಯ ಎಂ. ಬಿ
- ಏಕಾಂತಪ್ರಿಯ.
11 Nov 2017, 11:06 am
Download App from Playstore: