ಸರಿಸಾಟಿಯಾವುದು ಈ ಪ್ರೀತಿಗೆ...
ಕಣ್ಣಹನಿಯೊಂದೂ ಜಾರದಂತೆ
ರೆಪ್ಪೆಯೊಳಗೆ ಜೋಪಾನಮಾಡಿ
ಕಂದನ ಮಲಗಿಸುವಳು ಹೆತ್ತತಾಯಿ!
ಜೋ ಜೋ ಲಾಲಿಯ ಹಾಡುತ್ತ
ನಿದ್ದೆ ಮಾಡುವ ಮಗುವ ನೋಡುತ್ತ
ಪ್ರೀತಿಯಲಿ ಗಲ್ಲವ ಸವರುವಳು ಮುದ್ದುತಾಯಿ!
ಉರಿಬಿಸಿಲಲಿ ತಾ ನೋವ ನುಂಗಿ
ಮಮತೆಯ ಮಡಿಲಿನಲ್ಲಿ
ಕೈತುತ್ತು ತಿನ್ನಿಸುವ ದೇವತೆಯ ರೂಪ, ತಾಯಿ
ಮುದ್ದು ಮಗುವ ಸದಾ ನಗಿಸಲು
ಒಮ್ಮೊಮ್ಮೆ ಪ್ರಾಣಿಯಂತೆ ನಟನೆಮಾಡುತ್ತ
ಮತ್ತೊಮ್ಮೆ ಹುಚ್ಚಿಯಂತೆ ನಗುವಳು ಮಹಾತಾಯಿ!
ಬೀಸುವ ಚಳಿಗಾಳಿಗೆ, ಮಿಂಚು-ಗುಡುಗಿಗೆ
ನಗುತ್ತಲೇ ಮಗುವ ಅಪ್ಪಿಹಿಡಿದು
ಭಯವ ಎದುರಿಸಲು ಕಲಿಸುವವಳು ತಾಯಿ!
ಎಲ್ಲಾ ಸುಖವ ಕಂದನಿಗೆ ಮೀಸಲಿರಿಸಿ
ಮೇಣದ ಬತ್ತಿಯಂತೆ ತಾ ಉರಿದು
ಬೆಳಕನ್ನು ಚೆಲ್ಲುವಳು ಮಹಾತಾಯಿ!
(ಜಗತ್ತಿನಲ್ಲಿರುವ ಎಲ್ಲಾ ತಾಯಿಂದರಿಗೆ ನನ್ನೀ ಕವನ ಅರ್ಪಣೆ)
- ಪ್ರಿಯಾಂಕ
11 Nov 2017, 02:39 pm
Download App from Playstore: