ನನ್ನವಳು....

ಹೃದಯದಂಗಳದಲ್ಲಿ
ಪ್ರೇಮದ ರಂಗೋಲಿ ಇಟ್ಟು
ಎದೆಯ ಹೊಸ್ತಿಲ ಮೇಲೆ
ಗುಲಾಬಿಯ ದಳವನಿಟ್ಟು
ಬಲಗಾಲು ಒಳಗಿಡುತ ಬಂದವಳು,

ಮನಸಿನ ತೋಟದಲಿ
ಭಾವನೆಗಳ ಬೀಜ ಬಿತ್ತಿ
ಹೃದಯವನು ಕಸಿ ಮಾಡಿ ನೀರೆರೆದು
ಪ್ರೀತಿಯ ಬೆಳೆ ತಗೆದವಳು,,,

ಮುಂಜಾನೆಯ ಹೊಂಬಣ್ಣ
ಮೈತುಂಬಿ ಕೊಂಡವಳು
ನೀರಳಿನ ತನ್ನ ಬಿಂಬ
ನೋಡಿ ತಾನೆ ನಾಚಿದವಳು
ನೋಟದಲೆ ಚಂದಿರನ ಸೋಲಿಸಿದಳು,''

ನನಗಾಗಿ ಮತ್ತೊಮ್ಮೆ
ಜನುಮ ತಳೆದಿರುವವಳು
ನನ್ನ ಬಡಿತಕೆ ತಾ ಮಿಡಿದು
ಜೊತೆ ಸಾಗಿ ಬಂದವಳು
ಪ್ರತಿ ಜನುಮದಲೂ ಜೊತೆಗಾತಿ,
ನನ್ನವಳು....

- ಮಳೆಯಲ್ಲಿ ಜೋತೆಯಲ್ಲಿ

12 Nov 2017, 10:32 pm
Download App from Playstore: