ನಿರೀಕ್ಷೆ
ಹಳ್ಳಿಯ ಚಂದುಳ್ಳಿ ಚೆಲುವೆ ಎಂಬುವರು ಈ ರತಿಗೆ
ಕಾದಿರುವಳು ರತಿ ಮನ್ಮಥನಿಗೆ.
ಮಲೆನಾಡ ಮಡಿಲಲ್ಲಿ ಆಡಿ ಬೆಳೆದ ಊರ ಕಣ್ಮಣಿ ಇವಳು
ಸೋದರ ಮಾವನ ಮುದ್ದಿನ ಅರಗಿಳಿ ಇವಳು
ಮಳೆಗಾಲದ ಹಗಲಿನಲಿ
ಕಾಲು ಸಂಕದಲಿ ಕಾಲು ಇಳಿ ಬಿಟ್ಟು ಬಾಸ್ಕರನ ನೋಡುತ ಕನಸು ಕಾಣುತ ಕುಳಿತಿಹಳು
ಹೊಳೆಯು ಜುಳು ಜುಳು ಮಂಜುಳ ನಾದದ ಗೀತೆಯಲಿ ಮೈ ಮರೆತಿಹಳು....
ಅವನ ಕನಸಿನಲಿ ಕುಳಿತಿಹಳು ಸುಕುಮಾರಿ ಇಹದ ಚಿಂತೆ ಮರೆತು ನಸು ನಗುತಿಹಳು
ತೋಟದ ಸುಳಿಗಾಳಿ ಕಚಗುಳಿ ಇಡಲು ಕೋಮಲೆ ಲಜ್ಜೆಯಲಿ ಇನಿಯನ ನೆನೆಯುತಿಹಳು...
.
ಹಕ್ಕಿಗಳಿಂಚರದ ಕಲರವ,ಹೂವಿನ ಸುಗಂಧ,ಗುಡಿಯ ಗಂಟೆಯ ನಾದ ಇನಿಯನ ನೆನಪನು
ಮಧುರಗೊಳಿಸಿಹುದು
ಅವನ ನೆನಪಲಿ ಹೂವು ದುಂಬಿಯ ನಿರೀಕ್ಷೆಯಲಿ ಕಾದು ಕುಳಿತಿಹುದು
ಹಗಲು ಇರುಳುಗಳು ತಾನೇ ತಾನಾಗಿ ಕಳೆಯುತಿಹುದು...
- ನಾಗರಾಜ್
13 Nov 2017, 12:58 pm
Download App from Playstore: