ನವಪೀಳಿಗೆಯ
ಕನಸುಗಳು
ತುದಿಯಲ್ಲೇ ಚಿಗುರು
ಉದುರಲು ಬಯಸುತಿದೆ
ಮೊಗ್ಗು ಗಿಡದಲ್ಲೇ
ಬಾಡಲಿಚ್ಚಿಸುತ್ತಿದೆ
ಹಕ್ಕಿ ಗೂಡಲ್ಲೇ ಕುಳಿತು
ಹಾರಲು ಮರೆಯುತಿದೆ
ನಾಳೆಯ ನವ ಉದಯದ
ಆಸೆಯಿಲ್ಲ
ಇಂದಿನ ಸಹವಾಸದಲಿ
ಕಲಿಕೆಯ ತವಕವಿಲ್ಲ
ಇನ್ನೊಂದೆಡೆಯ ದಾರಿಯ
ನೋಡಿ ಕೊರಗುತ
ತನ್ ದಾರಿಯಲಿ ಸಾಗುವ
ಮುಂಚೆಯೇ
ತಾರತಮ್ಯದ ಪ್ರವಾಹದಲಿ
ಕೊಚ್ಚಿ ಹೋಗುತಿದೆ
ನವಪೀಳಿಗೆಯ ಕನಸುಗಳು...... ಸಹೃದಯಿ
- ಡಿ.ಸಿ.ಎನ್@100%
13 Nov 2017, 01:04 pm
Download App from Playstore: