ಮತ್ತದೇ ನೀಲಿ ಆಕಾಶ
ಜಾರುವ ಸಂಜೆಗೆ ಚಂದ್ರನ ಗೈರಿದೆ
ಮಿನುಗುವ ತಾರೆಯ ಮೋಡವು ತಡೆದಿದೆ
ಮತ್ತದೇ ನೀಲಿ ಆಕಾಶ
ಮತ್ತದೇ ಕತ್ತಲಿನ ಸನ್ನಿವೇಶ
ಮತ್ತದೇ ಬೆಳಕಿನ ಅನ್ವೇಷ |೧|
ಹರೆಯದ ಹಗಲಲಿ ಸೂರ್ಯನ ಗೈರಿದೆ
ಕಿರಣಗಳ ಕಿರುಗುಂಪನೂ ಮೋಡವು ತಡೆದಿದೆ
ಮತ್ತದೇ ಕಾರ್ಮೋಡಗಳ ಅಟ್ಟಹಾಸ
ಮತ್ತದೇ ಬಿರುಮಳೆಯ ಸನ್ನಿವೇಶ
ಮತ್ತದೇ ಕಣ್ಣೀರಿನ ಮೌನಾವೇಶ |೨|
ಬೆಳದಿಂಗಳ ಅಂಗಳದಿ ತಂಗಾಳಿಯ ಗೈರಿದೆ
ಬಾನನಿರಿಯುವಂತಿಹ ಶಿಖರವು ತಂಪು ಹವೆಯ ತಡೆದಿದೆ
ಮತ್ತದೇ ಬಿಸಿ ಉಸಿರಿನ ಉಚ್ಛ್ವಾಸ
ಮತ್ತದೇ ಕಡಲಲೆಗಳ ಸೆರೆವಾಸ
ಮತ್ತದೇ ಲತೆತರುಗಳ ಉಪವಾಸ |೩|
- ಅಕವಿ
13 Nov 2017, 08:32 pm
Download App from Playstore: