ಮಕ್ಕಳ ದಿನಾಚರಣೆ
ಮುದ್ದು ಮಾತಿನ ಪುಟ್ಟ ಪುಟಾಣಿಗಳೆ
ಹೂ ಗಿಡದಲಿ ಅರಳಿದ ಪುಷ್ಪಗಳೆ
ಅಳುತ,ನಗುತ ನೀವಿರಲು
ಕಳೆವುದು ದಿನ ರಾತ್ರಿ ಹಗಲು....
ವರುಷಕೊಮ್ಮೆ ಬರುವುದಂತೆ ಮಕ್ಕಳ ದಿನಾಚರಣೆ
ಹರುಷದಲಿ ನೀವು ನಲಿಯುತಿರಲು ವರುಷವಿಡೀ ನಿಮ್ಮದೆ ದಿನಾಚರಣೆ..
ಮನೆಯ ಮುಂದಿನ ಬೃಂದಾವನದಂತೆ
ನೀವಿಲ್ಲದ ಮನೆ ಬಿಕೋ ಎನುವುದಂತೆ
ನೀವಿರುವ ಮನೆ ದೇಗುಲದಂತೆ
ನೀವು ನಲಿಯುವ ತಾಣವು ನಂದನವನದಂತೆ...
ನಿಮ್ಮಿಂದ ಕಲಿಯಬೇಕು ನಾವು ಕ್ಷಣ ಬುದ್ದಿ
ನಿರೀಕ್ಷೆ ಇರದ ಮಮಕಾರದ ಬುದ್ದಿ
ನೋವು ನಲಿವುಗಳಿಗೆ
ಬಡತನ,ಸಿರಿತನದ ಒಣ ಹಮ್ಮುಗಳಿಲ್ಲದ ನಿಮ್ಮ ಮುಗ್ಧ ಮನದ ಕಿರುನಗುವಿಗೆ
ಸಣ್ಣ ಸಣ್ಣ ಉಡುಗೊರೆಗೂ ಸಂತಸ ಪಡುವ ನಿಷ್ಕಲ್ಮಶ ಮನಸ್ಸಿಗೆ ನಮ್ಮದೊಂದು ಮೆಚ್ಚುಗೆ...
ಪುಟ್ಟ ಮಕ್ಕಳಿಗೆ ತೃಪ್ತಿ ಪಡಿಸಬಹುದಂತೆ ನಿಮಗಿದೆ ಸಿಕ್ಕಿದ್ದರಲ್ಲಿ ಸಂತೃಪ್ತಿ
ದೊಡ್ಡವರಿಗಿಲ್ಲ ತೃಪ್ತಿ
ಕೊಟ್ಟಷ್ಟು ಮತ್ತಷ್ಟು
ಇನ್ನಷ್ಟು ಬೇಕೆಂಬ ಹಪಹಪಿಕೆ,ಊನ ಕಟ್ಟುವ ಬುದ್ದಿ
ಕಲಿಯಬೇಕಿದೆ ನಿಮ್ಮಿಂದ ನಾವು ಸಂತೃಪ್ತಿಯ ವಾಕ್ಯೆ
ಆಗಬೇಕಿದೆ
ನಿಮ್ಮಂತೆ ಕಲ್ಮಶವಿಲ್ಲದ ಮುಗ್ಧ ಮನಸುಗಳು...
- ನಾಗರಾಜ್
14 Nov 2017, 09:45 am
Download App from Playstore: