ಅಲೆಮಾರಿ
ನಿಲ್ಲದ ಅಲೆಮಾರಿ ಬದುಕು
ಅಲ್ಲಿಂದಿಲ್ಲಿಗೆ ಹೊತ್ತು ಸಾಗು ಸರಕು
ಸಿಕ್ಕ ಸಿಕ್ಕದ್ದೆಲ್ಲ ಮನಸೊಳಗೆ ತುರುಕು
ಮನಸಾದರೆ ಹರಕು ಮುರುಕು
ಆಗದಂತಾಗು ನಗು ಅಳುವುದಕು
ಆಗ ಚಡಪಡಿಸಿ ಮನಶಾಂತಿ ಹುಡುಕು
ಸಿಗುವವರೆಗೆ ಬಿಡದೆ ಎಲ್ಲೆಡೆ ತಡಕು
ಸಿಕ್ಕಮೇಲೆ ಮತ್ತೆ ಶುರು ಇನ್ನೇನೊ ಹುಡುಕಿ ಅಲೆಮಾರಿ ಬದುಕು
ಎಲ್ಲಿರುವೆಯೇ ಸ್ವಪ್ನ ಸುಂದರಿ
ಕನಸಲೇ ಕಾಡುವ ಚಂದ್ರ ಚಕೋರಿ
ನನ್ನ ಮನಸನೇ ಕದ್ದ ಜಿಂಕೆ ಮರಿ
ನನ್ನೆದಯೊಳಗೆ ನೀ ತಂದ ಕನಸುಗಳಂತು ತರಾವರಿ
ನಿನ್ನ ಹತ್ತಿರವಾಗಲು ನಾ ಮಾಡುತ್ತಿರುವಾಗ ತಯಾರಿ
ನೀನಾಗಿ ಬಿಡುವೆ ನನ್ನ ಕನಸಿನಿಂದಲೇ ಪರಾರಿ
ಪ್ರೀತಿಯಲಿ ಬಿದ್ದಿರುವೆ ನಿನ್ನೊಂದಿಗೆ ಯಾಮಾರಿ
ಬಂದುಬಿಡು ಎದುರಿಗೊಮ್ಮೆ ನಾ ನಿನ್ನ ಹುಡುಕಿಯಾಗುವ ಮುನ್ನ ಅಲೆಮಾರಿ
- ಶ್ರೀಕಾವ್ಯ
14 Nov 2017, 02:19 pm
Download App from Playstore: