ಒಂಟಿ ಮಗು

ಒಂಟಿ ಮಗುವೊಂದು ಅಡುತ್ತಿತ್ತು
ಏಕಾಂಗಿಯಾಗಿ ದೂಳು ನೆಲದ ಮೇಲೆ,
ಎಲ್ಲಾ ಯೋಚನೆಗಳ ಬಿಟ್ಟು
ತನಗೆ ತಾನೇ ಸಹಪಾಟಿಯಾಗಿ.

ಆಟದ ವಸ್ತುಗಳಿಲ್ಲ,
ಬೇಡದ ಬಂದುಗಳಿಲ್ಲ,
ಯಾರ ಹಂಗಿಲ್ಲದೆ ಒಬ್ಬಂಟಿಯಾಗಿ
ಅಡುತ್ತಿತ್ತು ಮಗು ನಡು ಬಯಲಿನಲ್ಲಿ...

ತಲೆ ಎತ್ತಿ ನೋಡದೇ
ತನ್ಮಯವಾಗಿತ್ತು ತನ್ನೊಳಗೆ
ತಾನೇ ಅರಿವೆನೇನೋ ಎಂಬ
ಸಿದ್ದ ಯೋಗಿಯಂತೆ.

ಆಡುತ್ತಲೇ ಇದೆ ಮಗು
ಹೊರ ಪ್ರಪಂಚದ ಗೊಡವೆಯ ಬಿಟ್ಟು
ತನ್ನ ಮನಸಿಗೆ ನಿಲುಕಿದ ಹೊಸ
ಬಾವನೆಗಳ ಬಯಲಿಗಿಟ್ಟು.

- ಶ್ರೀಗೋ.

14 Nov 2017, 06:16 pm
Download App from Playstore: