ಒಂಟಿತನ

ನೋವ ನಗರಿ ತಾಣದಲ್ಲಿ ತಂಗಿದ್ದ ಮನವೊಂದು ನೊಂದು ನಿನ್ನ ಮಡಿಲ ಸೇರಿದೆ ಒಂಟಿತನ ಜಂಟಿಯಾಗಿರು ನನ್ನ ನಂಟು ಬಿಡದಂತೆ ಕೊನೆವರೆಗೂ ಮೌನವಾಗಿ.

ಹಣೆಬರಹ ಬರೆಯುವಾಗ ಚತುರ್ಮುಖನ ಚಾವಟಿಯಲ್ಲಿ ಮುಗಿ ಬಿದ್ದ ಹಣೆಗಳೊಂದರಲ್ಲಿ ಅಂಧನ ಕಣ್ಣ ಬೆಳಕು ಹಲಸಿ ಹಾಕುವ ಕ್ರಮದಲ್ಲಿ ಕಣ್ತಪ್ಪಿ ನಾನು ಸಿಕ್ಕೇನೇನೋ ನನ್ನ ನಗುವ ಅಳುವಿನಿಂದೆ ಮುಚ್ಚಿ ಹಾಕಿರುವನು ಅವನು ಕೂಡ ಸ್ವಾರ್ಥಿಯಾದ ಪರಿಯಲ್ಲಿ.

ನನ್ನ ಗೋಳು ಕೇಳುವವರು ದೊರೆಯದಂತ ಸಮಯದಲ್ಲಿ ಜೊತೆಯಾಗಿ ಇಟ್ಟಿರುವನು ಒಂಟಿತನ ನನ್ನ ಬಾಳಲ್ಲಿ ಕಂಬನಿಯ ಜೊತೆಯಲ್ಲಿ...

- ಚುಕ್ಕಿ

14 Nov 2017, 11:21 pm
Download App from Playstore: