ಸದ್ದೇ ಮಾಡದೆ ನೀ ನನ್ನ ಸೆಳೆದೆ
ಮುಗ್ಧ ನಗುವಲ್ಲಿ ಸದ್ದೇ ಮಾಡದೆ
ನೀ ನನ್ನ ಸೆಳೆದೆ
ನಿನ್ನ ಪ್ರಬುದ್ಧ ಮಾತುಗಳಿಗೆ
ಮನದಲ್ಲಿ ಪ್ರೀತಿ ಮೇಳೈಸಿದೆ
ಸರಿಯೆನಿಸಿ ನಾ ಮಾಡುತಿರುವ
ತಪ್ಪು ಇದೊಂದೇ
ಈ ತಪ್ಪಿನ ತೆಪ್ಪದಲಿ ನನ್ನ ಬಾಳು
ಬಹುದೂರ ಕ್ರಮಿಸಬೇಕಿದೆ
ನಿನ್ನ ನಲಿವು ಮೂಡಿಸುವ ನಗುವಿಗೆ
ನನ್ನ ಮನವು ಒಲವ ಹೊರಹಾಕಿದೆ
ಹೃದಯವು ನಿನ್ನ ಭಾವನೆಗಳ
ಸಂಗ್ರಹಾಲಯವಾಗಲು ಹಂಬಲಿಸಿದೆ
ಜಗತ್ತಿನ ಎಲ್ಲಾ ಮೌಲ್ಯಗಳಲ್ಲಿ
ನೀನೇ ಅತ್ಯಮೂಲ್ಯವೆನಿಸಿದೆ
ನೀ ನನ್ನ ಕನಸಿನೊಡತಿಯಾಗಿ
ಬಾಳಿನ ಬೆಳಕಾಗಿ ಬರಬೇಕಿದೆ
- ಅಕವಿ
15 Nov 2017, 08:00 pm
Download App from Playstore: