ಅರ್ಧಾಂಗಿ
ಬಾರೆ ಬಾರೆ ಕೂತ್ಕೋಬಾರೆ ನಿಂಗಿ
ಮಾತಾಡೋದಾಯ್ತೆ ನನ್ನಾರ್ಧಾಂಗಿ
ಬರ್ತಾ ತಕ್ಕೋಬಾರೆ ತಾಂಬೂಲ ಹಂಗಿ
ಮಾತಾಡುವ ವೀಳ್ಯವ ಅಗಿತ ನುಂಗಿ
ಕೂತಿದಾಗ ಜಗಿತಾ ನಾ ಎಲೆ ಅಡ್ಕೆ ಸುಣ್ಣ
ನೋಡ್ತಿದ್ರೆ ನೀನು ಬಿಟ್ಟಂಗೆ ಬಿಟ್ಟು ಕಣ್ಣ
ಜೀವ್ನದೊಳ್ಗೆ ಅದ್ಕಿಂತ ಬೇಕೇನೆ ಬಣ್ಣ
ತುಂಬೈತೆ ಬಣ್ವೆಲ್ಲ ನಿನ್ಕಣ್ಣ ಒಳ್ಗೇನೆ ಚಿನ್ನ
ಗೊತ್ತು ಗುರಿ ಇಲ್ದ ನನ್ನ ಲಗ್ನಾದ್ಮೇಲೆ
ಎಂದೂ ಹೇಳ್ದವ್ಳಲ್ಲ ನಾ ನಿಂಗೆ ಒಲ್ಲೆ
ಬರೀ ಸಿಹೀನೆ ತುಂಬ್ಕೊಂಡಿರೊ ಕಬ್ಬಿನ್ಜಲ್ಲೆ
ನಗ್ಸಿ ನಗೋದ ಬಲ್ಲವ್ಳು ಇದ್ರೂ ನೋವಲ್ಲೆ
ಬದ್ಕಲ್ಲಿ ಬರ್ಲಿ ಹೋಗ್ಲಿ ಬುಡು ಬೇವು ಬೆಲ್ಲ
ನಗ್ನಗ್ತ ನೀನಿದ್ರೆ ನನ್ಜೊತೆಗೆ ನಂಗೆ ನೂರಾನೆ ಬಲ
ಹಿಂಗೇ ಇರ್ಲಿ ನಮ್ಮಿಬ್ರ ಬಾಳಬಂಧ ಚಿರಕಾಲ
ಜೋಪಾನ ಮಾಡುವೆ ನಿನ್ನ ಕಣ್ಣಲ್ಕಣ್ಣಿಟ್ಟು ನೂರ್ಕಾಲ
- ಶ್ರೀಕಾವ್ಯ
17 Nov 2017, 09:49 am
Download App from Playstore: