ನನ್ನ ಕಥೆಯ ಕೂಸು....
ಕಥೆಯಾಗ ಬಲ್ಲವಳು ಇವಳು
ಕವಿ ನುಡಿಯ ಸಿರಿ ಇವಳು
ಅರಳುತಿರುವ ಮೊಗ್ಗು ಇವಳು
ನಲಿದಾಡೊ ನವಿಲಿವಳು
ಹುಸಿ ಮನದ ಮಗು ಇವಳು
ನಗು ಮುಖದ ಗಿಳಿ ಇವಳು
ಬೆಳೆಯುತಿರುವ ಕೂಸಿವಳು
ಮಿನುಗುತಿರುವ ತಾರೆ ಇವಳು
ಮುದ್ದಾದ ಗೊಂಬೆ ಇವಳು
ನನ್ನೊಡಲ ಕೂಸಿವಳು
ನನ್ನ ಕಥೆಯ ಅರ್ಥ ಇವಳು...
........ನನ್ನವಳು......ನನ್ನ ಕೂಸು ಇವಳು....
- ರಾಗಸಿರಿ....
17 Nov 2017, 08:22 pm
Download App from Playstore: